Girl Flying By Kite : ಗಾಳಿ ಪಟದೊಂದಿಗೆ ಹಾರಿದ ಮಗು – ವಿಡಿಯೋ ವೈರಲ್….
ಗಾಳಿಪಟ ಉತ್ಸವನ್ನ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಅನೇಕ ದೇಶಗಳಲ್ಲಿ ಆಚರಿಸುತ್ತಾರೆ. ಈ ಹಬ್ಬದಲ್ಲಿ ಬಣ್ಣಬಣ್ಣದ ಗಾಳಿಪಟಗಳನ್ನ ಹಾರಿಸಲಾಗುತ್ತದೆ. ಮಕ್ಕಳು ಮತ್ತು ವಯಸ್ಕರು ಇಬ್ಬರೂ ಭಾಗವಹಿಸುತ್ತಾರೆ. ಸಂಕ್ರಾಂತಿ ಹಬ್ಬ ಬಂತೆಂದರೆ ಗಾಳಿಪಟಗಳನ್ನ ಹಾರಿಸುವುದು ವಿಶೇಷ….
ಎಂದಿನಂತೆ ಗಾಳಿಪಟ ಹಾರಿಸುವಾಗಿ ಪತಂಗದ ಜೊತೆಗೆ ಮಗುವೊಂದು ಗಾಳಿಯಲ್ಲಿ ಹಾರಿರುವ ಘಟನೆ ಸಂಚಲನ ಮೂಡಿಸಿದೆ. ಗಾಳಿಪಟದ ಜೊತೆಗೆ ಮಗು ಕೂಡ ಸ್ವಲ್ಪ ಹೊತ್ತು ಗಾಳಿಯಲ್ಲಿ ತೇಲಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಗು ಗಾಳಿಪಟದೊಂದಿಗೆ ಹಾರಿದ್ದು ನಿಜ ಆದರೇ ಈ ವಿಡಿಯೋ ಎರಡು ವರ್ಷಗಳ ಹಿಂದಿನದು ಆದರೇ ಸಂಕ್ರಾತಿಯ ಸಮಯದಲ್ಲಿ ಈ ವಿಡಿಯೋವನ್ನ ಮತ್ತೊಮ್ಮೆ ವೈರಲ್ ಮಾಡಲಾಗಿದೆ.
ಎರಡು ವರ್ಷಗಳ ಹಿಂದೆ ತೈವಾನ್‌ನಲ್ಲಿ ಗಾಳಿಪಟ ಉತ್ಸವ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಗಾಳಿಪಟಗಳನ್ನು ಹಾರಿಸುವುದನ್ನು ಆನಂದಿಸುತ್ತಿದ್ದಾರೆ. ಇದೇ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದೆ. ಗಾಳಿಪಟದ ಜೊತೆಗೆ ಮಗು ಕೂಡ ಮೇಲಕ್ಕೋಗಿದೆ. ಗಾಳಿಪಟದ ತುದಿಯ ಬಟ್ಟೆಗೆ ಮಗು ಸುತ್ತಿಕೊಂಡಿರುವುದನ್ನ ಗಮನಿಸದೇ ಗಾಳಿಪಟ ಹಾರಿಸಿದ್ದಾರೆ.
ಮೊದ ಮೊದಲೂ ಎಲ್ಲರು ಕಿರುಚಾಡಿ ಹೌಹಾರಿದ್ದಾರೆ. ಆದರೇ ಕೊನೆಗೂ ಮಗು ಕೆಲ ಕ್ಷಣಗಳ ಕಾಲ ಮೇಲಿದ್ದು ನಂತರ ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಎರಡು ವರ್ಷಗಳ ಹಿಂದೆ ತೈವಾನ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Girl Flying By Kite : A child who flew with a kite – video viral….