Delhi: ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಯತ್ನ

1 min read
Delhi Saaksha Tv

ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಯತ್ನ

ನವದೆಹಲಿ: 25 ವರ್ಷದ ಯುವತಿಯೊಬ್ಬಳು ಮೆಟ್ರೋ ನಿಲ್ದಾಣದ ಸೈಡ್ ವಾಲ್ ನ ಅಂಚಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿಸುರವ ಘಟನೆ ದೆಹಲಿಯ ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಯುವತಿ ಮೆಟ್ರೋ ನಿಲ್ದಾಣದ ಸೈಡ್ ವಾಲ್ ನ ಅಂಚಿನ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ  ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‍ಎಫ್) ಸಿಬ್ಬಂದಿ ಯುವತಿಯನ್ನು ಗಮನಿಸಿದ್ದಾರೆ. ತಕ್ಷಣವೇ ಶಿಫ್ಟ್ ಇನ್ ಚಾರ್ಜ್‍ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಮುಖ್ಯಸ್ಥರು ಯುವತಿಯನ್ನು ಕೆಳಗೆ ಬರುವಂತೆ ಮನವೊಲಿಸಲು ಯತ್ನಿಸಿದ್ದಾರೆ.

ಆದರೆ ಈ ವೇಳೆ ಯುವತಿ ತಾನು ಅಂಚಿನ ಮೇಲಿನಿಂದ ಇಳಿಯುವುದಿಲ್ಲ ಎಂದು ವಾದಮಾಡಿದ್ದಾಳೆ. ನಂತರ ಶಿಫ್ಟ್ ಇನ್ ಚಾರ್ಜ್ ಸ್ಟೇಷನ್ ಕಂಟ್ರೋಲರ್, ಮೆಟ್ರೋ ಕಂಟ್ರೋಲ್, ಕ್ಲಸ್ಟರ್ ಇನ್ಸ್‌ಪೆಕ್ಟರ್ ಮತ್ತು ಲೈನ್ ಇನ್ ಚಾರ್ಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ವ್ಯವಸ್ಥೆಗೊಳಿಸಿದ್ದಾರೆ.

ಕೊನೆಗೆ ಸಮೀಪದಲ್ಲಿದ್ದ ಮಾಲ್‍ವೊಂದರ ನಾಲ್ವರು ಸಿಬ್ಬಂದಿಯೊಂದಿಗೆ ಶಿಫ್ಟ್ ಇನ್ ಚಾರ್ಜ್ ಕೆಳಗೆ ಹೋಗಿ ದಪ್ಪವಾದ ಕಂಬಳಿ ವ್ಯವಸ್ಥೆಗೊಳಿಸಿ ಯುವತಿಯನ್ನು ರಕ್ಷಿಸಲು ಮುಂದಾದರು. ಹೀಗೆ ಸಕಲ ಪ್ರಯತ್ನಗಳ ನಂತರವೂ ಯುವತಿ ಅಂಚಿನಿಂದ ಕೆಳಗೆ ಬಿದ್ದಿದ್ದಾಳೆ. ಆದರೆ ಆಕೆಯನ್ನು ರಕ್ಷಿಸಿ, ತಕ್ಷಣವೇ ಸಮೀಪದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಇದೀಗ ಯುವತಿಗೆ ಪ್ರಜ್ಞೆ ಬಂದಿದ್ದು, ಆಕೆಯ ಬಲಗಾಲಿಗೆ ಕೆಲವು ಗಾಯಗಳಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd