UPಯಲ್ಲಿ ಮತ್ತೊಂದು ಹೇಯ ಕೃತ್ಯ : ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಟ್ಟ ಗಾಯಗಳಿಂದ ಅರೆ ನಗ್ನ ಸ್ಥಿತಿಯಲ್ಲಿ ಪತ್ತೆ
ಉತ್ತರಪ್ರದೇಶ: ಉತ್ತರ ಪ್ರದೇಶದ ಶಹಜನಾಪುರದ ಕಾಲೇಜು ಕ್ಯಾಂಪಸ್ ನಿಂದ ಕಳೆದ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ 21 ವರ್ಷದ ವಿದ್ಯಾರ್ಥಿನಿ ಸುಟ್ಟ ಗಾಯಗಳಿಂದ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದಾಳೆ. ಸೋಮವಾರ ಕ್ಯಾಂಪಸ್ ನಿಂದ ನಾಪತ್ತೆಯಾಗಿದ್ದ ಯುವತಿ ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಬಳಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿಯನ್ನ ಜೀವಂತವಾಗಿ ಸುಡಲು ಪ್ರಯತ್ನಿಸಲಾಗಿದ್ದು, ಹೇಗೋ ಕಷ್ಟ ಪಟ್ಟು ತಪ್ಪಿಸಿಕೊಂಡು ಬಂದಿದ್ದಾಗಿ ಯುವತಿ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
ಮನೆಕೆಲಸದಾಕೆಗೆ ಚಿತ್ರಹಿಂಸೆ ಕೊಟ್ಟು ಕೊಟ್ಟು ಕೊಂದೇ ಬಿಟ್ಟಳು ಈ ರಾಕ್ಷಸಿ..!
ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನಮಯಾನಂದ್ ನಡೆಸುತ್ತಿರುವ ಮುಮುಕ್ಷು ಆಶ್ರಯದ ಬಾಲಕಿಯರ SS ಕಾಲೇಜಿನಲ್ಲಿ ಈಕೆ ವ್ಯಾಸಂಗ ಮಾಡುತ್ತಿದ್ದಳು. ಈಕೆ ತನ್ನ ಸ್ನೇಹಿತೆಯ ಭಾವ ಮನೀಶ್ ಎಂಬಾತ ಕರೆ ಮಾಡಿದ್ದರಿಂದ ಹೋಗಿದ್ದಾಗಿ ಯುವತಿ ತಿಳಿಸಿದ್ದಾಳೆ ಎನ್ನಲಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಿಸಿ ಯುವತಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಸಂಪೂರ್ಣ ತನಿಖೆಯ ನಂತರವೇ ನಿಂಜಾಂಶ ಗೊತ್ತಾಗಬೇಕಿದೆ.
VIDEO VIRAL : ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಜೀವ ಉಳಿಸಿದ ಮಹಿಳಾ ಕಾನ್ಸ್ಟೇಬಲ್..!








