VIDEO VIRAL : ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಜೀವ ಉಳಿಸಿದ ಮಹಿಳಾ ಕಾನ್ಸ್ಟೇಬಲ್..!
ಉತ್ತರಪ್ರದೇಶ: ಚಲಿಸುತ್ತಿದ್ದ ರೈಲಿನ ಕೆಳಗೆ ಸಿಲುಕುತ್ತಿದ್ದ ಮಹಿಳೆಯನ್ನು, ಮಹಿಳಾ ಕಾನ್ಸ್ಟೇಬಲ್ ಒಬ್ಬರು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಲಕ್ನೋ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಹಿಳಾ ಕಾನ್ಸ್ ಟೇಬಲ್ ಮಹಿಳೆಯ ಜೀವ ಉಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದ್ದು, ನೆಟ್ಟಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಥೂ.. ಎಂಥ ಕ್ರೂರಿ ಈಕೆ… ಜಿರಾಫೆಯನ್ನು ಕೊಂದು ಅದರ ಹೃದಯದ ಜೊತೆಗೆ ಫೋಟೋಗೆ ಪೋಸ್..!
ಈ ವಿಡಿಯೋವನ್ನು ರೈಲ್ವೆ ಸಚಿವಾಲಯವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿನೀತ ಕುಮಾರಿ ಎಂಬ ಮಹಿಳಾ ಕಾನ್ಸ್ಟೇಬಲ್ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಇಂತಹ ಸಾಹಸಗಳಿಗೆ ಮತ್ತೆ ಕೈ ಹಾಕದಂತೆ ಮನವಿ ಮಾಡಿದ್ದಾರೆ.
ವೀಡಿಯೋದಲ್ಲಿ ಮಹಿಳೆಯು ತನ್ನ ಸ್ನೇಹಿತನೊಂದಿಗೆ ಬರುತ್ತಿರುತ್ತಾಳೆ. ಈ ವೇಳೆ ಆಕೆಯ ಸ್ನೇಹಿತ ಚಲಿಸುತ್ತಿದ್ದ ರೈಲನ್ನು ಏರುತ್ತಾನೆ. ಆತನ ಹಿಂದೆ ಮಹಿಳೆ ಕೂಡ ರೈಲನ್ನು ಏರಲು ಪ್ರಯತ್ನಿಸಿ ಕಾಲು ಜಾರಿ ಕೆಳಗೆ ಬೀಳುತ್ತಾಳೆ. ಈ ವೇಳೆ ರೈಲು ಮತ್ತು ಫ್ಲಾಟ್ಫಾರ್ಮ್ ಮಧ್ಯೆ ಮಹಿಳೆ ಸಿಲುಕಿಕೊಳ್ಳುತ್ತಿದಂತೆಯೇ ಕರ್ತವ್ಯದಲ್ಲಿದ್ದ ವಿನೀತ ಕುಮಾರಿ ಕೂಡಲೇ ಓಡಿ ಬಂದು ಮಹಿಳೆಯನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಾರೆ.
लखनऊ स्टेशन पर महिला यात्री चलती ट्रेन में चढ़ने का प्रयास करते हुए गिर गई, जिसे ड्यूटी पर तैनात सतर्क कॉन्स्टेबल विनीता कुमारी द्वारा त्वरित कार्रवाई करते हुए सुरक्षित बचा लिया गया।
आप से अनुरोध है की चलती हुई गाड़ी में चढ़ने-उतरने का प्रयास ना करें यह जानलेवा हो सकता है। pic.twitter.com/wLFF87yn0f
— Ministry of Railways (@RailMinIndia) February 23, 2021