ಥೂ.. ಎಂಥ ಕ್ರೂರಿ ಈಕೆ… ಜಿರಾಫೆಯನ್ನು ಕೊಂದು ಅದರ ಹೃದಯದ ಜೊತೆಗೆ ಫೋಟೋಗೆ ಪೋಸ್..!
ದಕ್ಷಿಣ ಆಫ್ರಿಕಾ: ಮಹಿಳೆಯೊಬ್ಬಳು ಜಿರಾಫೆಯನ್ನ ಕೊಂದು ಅದರ ಹೃದಯ ಹೊರತೆಗೆದು, ಅದರ ಜೊತೆಗೆ ಫೋಟೋಗೆ ಫೋಸ್ ಕೊಟ್ಟು ವಿಕೃತಿ ಮೆರೆದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ಮೆರಿಲೈಝ್ ವೆನ್ಡರ್ ಎಂಬ ಮಹಿಳೆ ಸುಮಾರು 17 ವರ್ಷದ ಹಳೆಯ ಜಿರಾಫೆಯನ್ನು ಕೊಂದು ಅದರ ಹೃದಯವನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ಕೊಟ್ಟು ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇನ್ನೂ ಚಂದ್ರನ ಮೇಲೆ ನಿಂತ ಅನುಭವವಾಗಿದೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾಳೆ. ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ತಿದ್ದಾರೆ. ಅಲ್ದೇ ಆಕೆಯ ಅಕೌಂಟ್ ಬ್ಲಾಕ್ ಮಾಡಿ ಆಕೆಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ: ಓರ್ವ ಸಾವು
ಜಿರಾಫೆಯನ್ನು ಪ್ರೇಮಿಗಳ ದಿನದ ಉಡುಗೊರೆಯಾಗಿ ಗುಂಡಿಕ್ಕಿ ಕೊಲ್ಲಲು ಪತಿ ಹಣ ನೀಡಿದ್ದ ಹಿನ್ನೆಲೆ ಆಕೆ ಜಿರಾಫೆಯನ್ನು ಕೊಂದಿದ್ದಳು. ಅದೂ ಅಲ್ಲದೇ ಅದರ ಮೇಲೆ ನಿಂತು ಹಾಗೂ ಅದರ ಹೃದಯವನ್ನು ಹಿಡಿದು ಫೋಟೋ ತೆಗೆಸಿಕೊಂಡು ಸಾಲದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದಾಳೆ.
ಉತ್ತರಪ್ರದೇಶ | ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ : 7 ಮಂದಿ ಸಾವು