ಬೆಂಗಳೂರು: ಆರೋಗ್ಯ ಖಾತೆ ವಾಪಸ್ ಪಡೆದು ಸಚಿವ ಸುಧಾಕರ್‍ಗೆ ಹೆಚ್ಚುವರಿಯಾಗಿ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಸಚಿವ ಶ್ರೀರಾಮುಲು, ಇಂದು ಸಿಎಂ ಯಡಿಯೂರಪ್ಪ ನಡೆಸಿದ ಸಂಧಾನ ಬಳಿಕ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದಿದ್ದರೆ, ಡಿಪ್ರಮೋಟ್ ಅಲ್ಲ, ಪ್ರಮೋಷನ್ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ.

ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಸಂಧಾನದ ಬಳಿಕ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಈಗ ಸಿಎಂ ನಿರ್ಧಾರ ತೆಗೆದುಕೊಂಡ ಕಾರಣ ನಾನು ಸಂತೋಷದಿಂದ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದಿದ್ದಾರೆ.
ಸಿಎಂಗೆ ನಾನು ಸಮಾಜ ಕಲ್ಯಾಣ ಇಲಾಖೆ ಬೇಕು ಅಂತ ಹಿಂದೆಯೇ ಮನವಿ ಮಾಡಿದ್ದೆ. ಸುಧಾಕರ್ ವೈದ್ಯರು. ಸಿಎಂ ಆರೋಗ್ಯ ಮತ್ತು ವೈದ್ಯಕೀಯ ಅವರಿಗೆ ವಹಿಸಿದ್ದಾರೆ. ಸರ್ಕಾರ ಬಂದಾಗಿನಿಂದಲೂ ನಾನು ಸಿಎಂಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದೇನೆ. ಸಮಾಜ ಕಲ್ಯಾಣ ಇಲಾಖೆ ಬೇಕು ಅಂತಾ ಮೊದಲೇ ಸಿಎಂ ಗೆ ಮನವಿ ಮಾಡಿದ್ದೆ. ಹಿಂದೆ 2008ರಲ್ಲಿ ಒಳ್ಳೆಯ ಕೆಲಸ ಮಾಡಿದ್ದೀರಿ ಅಂತಾ ನನಗೆ ಆರೋಗ್ಯ ಇಲಾಖೆ ಕೊಟ್ಟಿದ್ದರು ಎಂದು ರಾಮುಲು ಸಮರ್ಥಿಸಿಕೊಂಡಿದ್ದಾರೆ.
ಸುಧಾಕರ್ ಬಳಿ ಎರಡೂ ಖಾತೆ ಇದ್ರೆ ಸುಧಾರಣೆ ಸಾಧ್ಯ. ನಾವೆಲ್ರೂ ಒಟ್ಡಾಗಿ ಸೇರಿ ಕೆಲಸ ಮಾಡ್ತೇವೆ. ಕೊರೊನಾ ವಿಚಾರ ಬೆಂಗಳೂರಲ್ಲಿ ಸುಧಾಕರ್ ನೋಡಿಕೊಳ್ಳುತ್ತಿದ್ದರು. ಬೆಂಗಳೂರಿನಲ್ಲಿ ಈಗ ಕೋವಿಡ್ ಹೆಚ್ಚಾಗಿದೆ. ಹಾಗಂತ ಸುಧಾಕರ್ ವಿಫಲ ಅಂತ ಅರ್ಥಾನಾ ? ಎಂದು ಪ್ರಶ್ನಿಸಿದ ಶ್ರೀರಾಮುಲ, ನಾನು ರಾಜ್ಯಾದ್ಯಾಂತ ಪ್ರವಾಸ ಮಾಡಿದ್ದೇನೆ. ಎರಡೂ ಖಾತೆ ಒಬ್ಬರ ಬಳಿ ಇದ್ರೆ ಸುಲಭ ನಿರ್ಧಾರ ತಗೋಬಹುದು ಅಂತ ಖಾತೆ ಬದಲು ಮಾಡಿದ್ದಾರೆ ಎಂದು ನಿಮ್ಮ ವೈಫಲ್ಯನಾ ಎನ್ನುವ ಪ್ರಶ್ನೆಗೆ ಶ್ರೀರಾಮುಲು ಸಮರ್ಥನೆ ನೀಡಿದ್ದಾರೆ.
ಶ್ರೀರಾಮುಲುಗೆ ಡೀಪ್ರಮೋಟ್ ಆಗಿಲ್ಲ, ಪ್ರಮೋಷನ್ ಸಿಕ್ಕಿದೆ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ ಸ್ಥಳೀಯವಾಗಿತ್ತು.
ಬೇರೆ ರಾಜ್ಯಗಳಲ್ಲಿ ಆರೋಗ್ಯ, ವೈದ್ಯಕೀಯ ಒಂದೇ ಇಲಾಖೆ. ನಾವಿಬ್ರೂ ಪರಿಶ್ರಮದಿಂದ ಕೆಲಸ ಮಾಡಿದ್ದೇವೆ. ಯಾರು ಹೆಚ್ಚು ಯಾರು ಕಡಿಮೆ ಅಂತ ಇಲ್ಲ. ತಾಂತ್ರಿಕವಾಗಿ, ಸಮನ್ವಯತೆಗಾಗಿ ಎರಡೂ ಇಲಾಖೆ ಒಬ್ಬರ ಬಳಿ ಕೊಟ್ಡಿದ್ದಾರೆ. ರಾಮುಲು ಅಣ್ಣರಿಗೆ ದೊಡ್ಡ ಖಾತೆ ಕೊಟ್ಟಿದ್ದಾರೆ. ಹೀಗಾಗಿ ಶ್ರೀರಾಮುಲುಗೆ ಡೀಪ್ರಮೋಟ್ ಆಗಿಲ್ಲ, ಪ್ರಮೋಷನ್ ಸಿಕ್ಕಿದೆ ಎಂದು ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಸುಧಾಕರ್, ಖಾತೆ ಬದಲಾವಣೆ ಬಗ್ಗೆ ಸಿಎಂ ನಮ್ಮಿಬ್ಬರ ಜತೆಗೂ ಮಾತಾಡಿದ್ದಾರೆ. ಬದಲಾವಣೆಗೆ ಮೊದಲು ಇಬ್ಬರ ಗಮನಕ್ಕೂ ತಂದಿದ್ರು. ಇಬ್ಬರಿಗೂ ಸಮರ್ಥವಾಗಿ ಕೆಲಸ ಮಾಡಿ ಅಂತ ಸಿಎಂ ಸೂಚಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಮರ್ಥವಾಗಿ ನಿಭಾಯಿಸಲು ರಾಮುಲು ಅವರಿಗೂ ಸೂಚಿಸಿದ್ದಾರೆ. ಪರಿಶಿಷ್ಟ ಜಾತಿ ಕಲ್ಯಾಣ ಆಗಬೇಕಂದು ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ನೀರಾವರಿ ನಂತರದ ದೊಡ್ಡ ಇಲಾಖೆ ಇದು ಎಂದು ಸುಧಾಕರ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








