Maxwell : ಕೊಹ್ಲಿ ಜತೆ ಬ್ಯಾಟಿಂಗ್ ಕಷ್ಟ.. ನನ್ನ ವೈಫಲ್ಯಕ್ಕೆ ವಿರಾಟ್ ಕಾರಣ..
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿನಿಂದ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಬೆಂಗಳೂರು ಪಾಳಯ ಫುಲ್ ಖುಷ್ ಆಗಿದೆ.
ಡು ಆರ್ ಡೈ ಪಂದ್ಯದಲ್ಲಿ ಗೆದ್ದ ಕಾರಣ ಆರ್ ಸಿಬಿ ಡ್ರೆಸಿಂಗ್ ರೂಮ್ ನಲ್ಲಿ ಸಂಭ್ರಮ ಮನೆ ಮಾಡಿತ್ತು.
ಈ ಸಂದರ್ಭದಲ್ಲಿ ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾಜಿ ನಾಯಕ ವಿರಾಟ್ ಕೊಹ್ಲಿಯ ತಮಾಷೆಯಾಗಿ ಕಾಲೆಳೆದಿದ್ದಾರೆ.
ಈ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ ರನೌಟ್ ಆದರು, ಇದನ್ನ ನೆನಪು ಮಾಡಿಕೊಂಡು ಮ್ಯಾಕ್ಸ್ ವೆಲ್, “ಅಯ್ಯೋ, ನಾನು ನಿಮ್ಮೊಂದಿಗೆ ಬ್ಯಾಟ್ ಮಾಡಲು ಸಾಧ್ಯವಿಲ್ಲ ಕಣಪ್ಪಾ, ನೀನು ತುಂಬಾ ವೇಗವಾಗಿ ಓಡುತ್ತೀಯಾ, ಒಂದು ರನ್ ಇದ್ದಾಗ ಎರಡು ರನ್ ಓಡುತ್ತೀಯಾ,, ನಾನು ಆ ರೀತಿ ಅಲ್ಲ.. ಎಂದರು. ಇದಕ್ಕೆ ವಿರಾಟ್ ಕೊಹ್ಲಿ ಸುಮ್ಮನೇ ನಕ್ಕರು.

ಅಂದಹಾಗೆ ಆರ್ ಸಿಬಿ ಇನ್ನಿಂಗ್ಸ್ ನ 9ನೇ ಓವರ್ ನಲ್ಲಿ ಜಡ್ಡು ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಸಿಂಗಲ್ ಗೆ ಪ್ರಯತ್ನಿಸಿದರು.
ಹೀಗಾಗಿ ನಾನ್ ಸ್ಟ್ರೈಕ್ ಎಂಡ್ ನಲ್ಲಿದ್ದ ಮ್ಯಾಕ್ಸಿ ಕೊಹ್ಲಿಗೆ ಉತ್ತರವಾಗಿ ಕ್ರೀಸ್ ತೊರೆದರು.
ಆದರೆ, ಅದಾಗಲೇ ಚೆಂಡನ್ನು ಸ್ವೀಕರಿಸಿದ ರಾಬಿನ್ ಊತಪ್ಪ, ಕೀಪರ್ ಧೋನಿಗೆ ವಿಕೆಟ್ ಎಸೆದರು.
ಹೀಗಾಗಿ ಮೂರು ರನ್ ಗಳಿಗೆ ಮ್ಯಾಕ್ಸ್ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು. glenn-maxwell-fun-banter-virat-kohli