ADVERTISEMENT
Thursday, July 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ರೇಣುಕಾಂಬ ದೇವಸ್ಥಾನ, ಚಂದ್ರಗುತ್ತಿ, ಶಿವಮೊಗ್ಗ ಇತಿಹಾಸ ಮತ್ತು ಮಹಿಮೆ

History and Glory of Sri Renukamba Temple, Chandragutti, Shimoga

Shwetha by Shwetha
April 26, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿದೆ. ಇದು ಒಂದು ಪುರಾತನ ಮತ್ತು ಪವಿತ್ರವಾದ ಗುಹಾಂತರ ದೇವಾಲಯ. ಈ ದೇವಾಲಯವು ರೇಣುಕಾ ದೇವಿಗೆ ಸಮರ್ಪಿತವಾಗಿದೆ, ಅವಳು ಜಮದಗ್ನಿ ಋಷಿಯ ಪತ್ನಿ ಮತ್ತು ಪರಶುರಾಮನ ತಾಯಿ ಎಂದು ನಂಬಲಾಗಿದೆ.

ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು ಚಂದ್ರುಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಾಲಯವು ಮುಜರಾಯಿ ದೇವಾಲಯವಾಗಿರುತ್ತದೆ. ಹಾಗೂ ದೇವಾಲಯವು ಅರಣ್ಯ ಪ್ರದೇಶದಲ್ಲಿದ್ದು ಮತ್ತು ಕೇಂದ್ರ ಪುರತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯವಾಗಿರುತ್ತದೆ.

Related posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ನನ್ನನ್ನೇ ಪೊರಕೆಯಿಂದ ಹೊಡೆಯಿರಿ ಆದರೆ ಅಧಿಕಾರಿಗಳ ಮೇಲೆ ಕೈ ಹಾಕಬೇಡಿ. ಬಿಡದಿ ಹಿಂಸಾಚಾರಕ್ಕೆ ಡಿಕೆ ಶಿವಕುಮಾರ್ ಭಾವುಕ ಪ್ರತಿಕ್ರಿಯೆ

July 16, 2026
ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

July 16, 2026

ದೇವಾಲಯವು ಸಮೂಹ ದೇವಾಲಯವಾಗಿದ್ದು ಮೂಲ ಶ್ರೀ ರೇಣುಕಾಂಬ ದೇವಿ ದೇವಾಲಯ ,ಶ್ರೀ ಪರುಶುರಾಮ ದೇವಾಲಯ, ಶ್ರೀ ಮಾತಂಗಿ ದೇವಾಲಯ ಮತ್ತು ಶ್ರೀ ಶೂಲಬೀರಪ್ಪ ದೇವಾಲಯಗಳು ಇರುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ದೇವಾಲಯದ ಇತಿಹಾಸಕ್ಕೆ ಸಂಬಂದಿಸಿದಂತೆ, ಚಂದ್ರಗುತ್ತಿ (ಪ್ರಾಚೀನಕಾಲದ ಚಂದ್ರಗುಪ್ತಪುರ)ಕ್ರಿ.ಶ 3 ರಿಂದ 6ನೇ ಶತಮಾನದವರೆಗೆ ಬನವಾಸಿ ಕದಂಬರ ಕಾಲದ ಪ್ರಸಿದ್ದ ಪಟ್ಟಣವಾಗಿತ್ತು, ವಿಜಯನಗರ ರಾಜ ವೀರ ಹರಿಹರನ(1377-1404)ಕಾಲದಲ್ಲಿ ಪಾಚಣ್ಣ ಎಂಬ ಸ್ಥಳೀಯ ನಾಯಕ ಚಂದ್ರಗುತ್ತಿ ಮತ್ತು ಇತರೆ ಪ್ರದೇಶಗಳನ್ನು ಆಳುತ್ತಿದ್ದುದಾಗಿ ಕ್ರಿ.ಶ,1396ರ ಒಂದು ಶಾಸನದಿಂದ ತಿಳಿದುಬರುತ್ತದೆ. ಕದಂಬ ರಾಜರ ಕಾಲದಲ್ಲಿಯೇ ದೇವಾಲಯ ನಿರ್ಮಾಣ ಆಗಿರಬಹುದೆಂದು, ಅನಂತರ ಈ ಸ್ಥಳವು ಕೆಳದಿ ನಾಯಕರ ಅಳ್ವಿಕೆಗೆ ಒಳಪಟ್ಟಿತು ಎಂದು‌ ತಿಳಿದುಬರುತ್ತದೆ.

ಚಂದ್ರಗುತ್ತಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕಿರಿದಾದ ಗುಡ್ಡದ ಮೇಲೆ ನಿರ್ಮಿತವಾಗಿರುವ
ರೇಣುಕಾಂಬ ದೇವಾಲಯವು ಒಂದು ವಿಶಾಲವಾದ ನೈಸರ್ಗಿಕ ಗುಹೆಯಾಗಿದ್ದು, ದೇವಾಲಯವು ಪೂರ್ಣವಾಗಿ ಕಲ್ಲು ಕಟ್ಟಡವಾಗಿರುತ್ತದೆ ಹಾಗೂ ಜೈನ ದೇವಾಲಯಳ ಮಾದರಿಯಲ್ಲಿ ಕಲ್ಲಿನಲ್ಲಿ ಕೆತ್ತಲಾಗಿರುವ ಚಿತ್ರಗಳು, ಲಿಂಗ ಮುದ್ರೆ/ನಾಗಲಂಚನಗಳನ್ನು ಒಳಗೊಂಡ ಕಲ್ಲಿನ ಚಿತ್ರಗಳಿರುತ್ತವೆ. ಒಳಭಾಗದಲ್ಲಿ ಒಂದು ಸಣ್ಣ ಶಿವಲಿಂಗವಿದ್ದು ದೊಡ್ಡ ಪುಷ್ಪಾಕಾರದ ಎರಡು ಬಂಡೆಗಳ ಮದ್ಯ ಗುಹೆ ಇರುತ್ತದೆ. ಜಮದಗ್ನಿ ಮತ್ತು ರೇಣುಕಾಂಬೆ ಲೋಕ ಸಂಚಾರಕ್ಕಾಗಿ ಬಂದಾಗ ತನ್ನ ನಿತ್ಯಾನುಷ್ಠಾನಕ್ಕಾಗಿ ಕುಳಿತಿರುವಾಗ ರೇಣುಕಾದೇವಿಯನ್ನು ರಾಕ್ಷಸರು ಬೆನ್ನತ್ತಿರುತ್ತಾರೆ, ಆಗ ರೇಣುಕಾದೇವಿಯು ಓಡಿಬಂದು ಗುಹೆ ಹೊಕ್ಕು ಶಿವನನ್ನು ಪ್ರಾರ್ಥಿಸುತ್ತಾಳೆ ಆಗ ಶಿವನು ಪ್ರತ್ಯಕ್ಷನಾಗಿ ಅವಳನ್ನು ಕಾಪಾಡುತ್ತಾನೆ ಎಂಬ ಪ್ರತೀತಿ ಇದೆ.

ಶ್ರೀ ರೇಣುಕಾಂಬೆಯ ದೇವಾಲಯದ ಎದುರುಗಡೆ ಕಲ್ಲಿನಿಂದ ಕಟ್ಟಲ್ಪಟ್ಟ ಚಿಕ್ಕ ಗುಡಿ ಇದ್ದು, ಮೂರು ಅಡಿ ಎತ್ತರದ ಒಂದುವರೆ ಅಡಿ ಅಗಲದ ಪರುಶುರಾಮರ ವಿಗ್ರಹವಿದ್ದು, ವಿಗ್ರಹಕ್ಕೆ ನಾಲ್ಕು ಕೈಗಳು ಇರುತ್ತವೆ, ಮುಂಭಾಗದ ಬಲಗೈಯಲ್ಲಿ ಚೌಡಿಕೆ ಬಾರಿಸುವ ಕಡ್ಡಿ, ಎಡಗೈಯಲ್ಲಿ ಚೌಡಿಕೆ ಇದೆ, ಹಿಂಭಾಗದ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಕು ಇರುತ್ತದೆ, ವಿಗ್ರಹದ ಕೆಳಬಾಗದಲ್ಲಿ ಬಲಕ್ಕೆ ಪರುಶು (ಕೊಡಲಿ) ಇದ್ದು ವಿಗ್ರಹದ ಸುತ್ತಲೂ ಕಲ್ಲಿನ ಪ್ರಭಾವಳಿ ಇರುತ್ತದೆ.

ಶ್ರೀ ರೇಣುಕಾಂಬೆಯ ದೇವಾಲಯದ ಬಲ ಬಾಗದಲ್ಲಿ ಶ್ರೀ ಮಾತಂಗಿ ದೇವಾಲಯ ಇದ್ದು, ಶ್ರೀ ಮಾತಂಗಿ ದೇವಿಯನ್ನು ಶ್ರೀ ರೇಣುಕಾಂಬೆಯ ತಂಗಿ ಎಂದು ಭಕ್ತಾಧಿಗಳ ನಂಬಿಕೆಯಾಗಿರುತ್ತದೆ, ದೇವಾಲಯಕ್ಕೆ ಬಂದಂತಹ ಭಕ್ತಾಧಿಗಳು ಮೊದಲನೆಯಾದಾಗಿ ಶ್ರೀ ಮಾತಂಗಿ ದೇವಾಲಯಕ್ಕೆ ಪೂಜಾ ಕಾರ್ಯ ನೆರವೇರಿಸಿ ನಂತರ ಶ್ರೀ ರೇಣುಕಾಂಬೆಯ ದರ್ಶನ ಹಾಗೂ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ.

ಶ್ರೀ ರೇಣುಕಾಂಬ ದೇವಾಲಯದ ಎಡಬಾಗದ ಮೆಟ್ಟಿಲುಗಳನ್ನು ಇಳಿದು ಬಂದರೆ ಸಿಗುವುದೇ ಶ್ರೀ ಶೂಲ ಭೀರಪ್ಪ ದೇವಾಲಯ, ಭಕ್ತರುಗಳು ತಮ್ಮ ಸಂಕಲ್ಪಗಳು ನೆರವೇರಿದ ನಂತರ ಶೂಲಗಳನ್ನು ದೇವಾಲಯಕ್ಕೆ ಅರ್ಪಿಸುತ್ತಾರೆ, ಭಕ್ತರು ಕೊಟ್ಟಂತಹ ಅಪರ ಶೂಲಗಳು ಒತ್ತೋತ್ತಾಗಿ ಹುತ್ತದ ಆಕಾರದಲ್ಲಿ ಸೇರಿಕೊಂಡಿದ್ದು, ತ್ರಿಶೂಲಗಳು ಇಲ್ಲಿ ಬೆಳೆಯುತ್ತವೆ ಎಂದು ಭಕ್ತರ ನಂಬಿಕೆಯಾಗಿರುತ್ತದೆ.

ದೇವಾಯವು ಬೆಟ್ಟ/ಗುಡ್ಡದ ಮೇಲಿದ್ದು ಕೆಳ ಭಾಗದಿಂದಲೂ ಸೂಮಾರು 200 ಮೆಟ್ಟಿಲುಗಳಿದ್ದು, ಮೆಟ್ಟಿಲುಗಳ ಮುಂಬಾಗದಲ್ಲಿ ಪುರಾತನ ಕಾಲದ ಪುಷ್ಕರಣಿ ಇದ್ದು ಭಕ್ತರುಗಳು ಪುಷ್ಕರಣಿಯಲ್ಲಿನ ಜಲವನ್ನು (ಜೋಗುಳ ಬಾವಿ ತೀರ್ಥ)ಎಂದು ನಂಬಿರುತ್ತಾರೆ.

ದೇವಾಲಯಕ್ಕೆ ಭಕ್ತರುಗಳು ಮಂಗಳವಾರ ಮತ್ತು ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದು
ದರ್ಶನ ಪಡೆದುಕೊಳ್ಳುತ್ತಾರೆ ಹಾಗೂ ಪ್ರತಿ ಮಾಹೆಯ ಹುಣ್ಣಿಮೆ ಉತ್ಸವಗಳು,ಆಶ್ವೀಜ ಮಾಸದಲ್ಲಿ ನವರಾತ್ರಿ (ದಸರಾ)ಉತ್ಸವಗಳು ಫಾಲ್ಗುಣಶುದ್ದ ನವಮಿಯಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಈ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರುಗಳು ದೇವರ ದರ್ಶನ ಪಡೆಯುತ್ತಾರೆ.

ದೇವಾಲಯದ ಮುಂದೆ ಚಿಕ್ಕದಾದ ಕೊಳವಿದೆ, ಇದನ್ನು ತೊಟ್ಟಿಲ ಬಾವಿ ಎಂದು ಕರೆಯುತ್ತಾರೆ. ಇಲ್ಲಿ ನಾಗರ ಕಲ್ಲು ಮತ್ತು ದೇವಿಯ ಪಾದದ ಗುರುತುಗಳನ್ನು ಹೊಂದಿರುವ ಬಂಡೆಯೂ ಇದೆ.

* ಗುಹೆಯ ಹೊರಭಾಗವು ಚಾಲುಕ್ಯ ಶೈಲಿಯಲ್ಲಿದೆ ಮತ್ತು ವಿಜಯನಗರ ಕಾಲದಲ್ಲಿ ಕಂಬಗಳ ಸಭಾಮಂಟಪವನ್ನು ಸೇರಿಸಲಾಗಿದೆ.

* ದೇವಾಲಯದ ಪಶ್ಚಿಮಕ್ಕೆ ಭೈರವನ ಸಣ್ಣ ದೇವಾಲಯವಿದೆ.

* ಈ ದೇವಾಲಯವು ಮಂಗಳವಾರ ಮತ್ತು ಶುಕ್ರವಾರದಂದು ಪೂರ್ತಿ ದಿನ ತೆರೆದಿರುತ್ತದೆ.

ಚಂದ್ರಗುತ್ತಿಯು ತನ್ನ ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವದಿಂದಾಗಿ ಅನೇಕ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸುತ್ತಲೂ ದಟ್ಟವಾದ ಕಾಡು ಮತ್ತು ಬೆಟ್ಟಗಳಿರುವುದರಿಂದ ಈ ಸ್ಥಳವು ಸುಂದರವಾದ ಮತ್ತು ಶಾಂತಿಯುತ ವಾತಾವರಣವನ್ನು ಹೊಂದಿದೆ.

ShareTweetSendShare
Join us on:

Related Posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ನನ್ನನ್ನೇ ಪೊರಕೆಯಿಂದ ಹೊಡೆಯಿರಿ ಆದರೆ ಅಧಿಕಾರಿಗಳ ಮೇಲೆ ಕೈ ಹಾಕಬೇಡಿ. ಬಿಡದಿ ಹಿಂಸಾಚಾರಕ್ಕೆ ಡಿಕೆ ಶಿವಕುಮಾರ್ ಭಾವುಕ ಪ್ರತಿಕ್ರಿಯೆ

by Shwetha
July 16, 2026
0

ಬೆಂಗಳೂರು: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ಮತ್ತು ನೋವು ವ್ಯಕ್ತಪಡಿಸಿದ್ದಾರೆ....

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ: ಕಾವೇರಿ ಸಭೆಯಲ್ಲಿ ಕರ್ನಾಟಕದ ವಾದ

by Shwetha
July 16, 2026
0

ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು, ಪ್ರಸ್ತುತ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ವಾದ ಮಂಡಿಸಿದ್ದಾರೆ. ಅಧಿಕಾರಿಗಳ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಮಿಸ್ಟರ್ ಡಿ ಕೆ ಶಿವಕುಮಾರ್ ನಾನು ನಿಮ್ಮನ್ನ ಸಿಎಂ ಅಂತ ಕರೆಯಲ್ಲ: ನಾನು ಆಕಸ್ಮಿಕ ಸಿಎಂ ಆದ್ರೂ ಏಜೆಂಟ್ ಇಟ್ಟುಕೊಂಡಿರಲಿಲ್ಲ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆಯೇ?-ಡಿಕೆಶಿಗೆ ಮಿಸ್ಟರ್ ಎಂದು ಸಂಬೋಧಿಸಿ ಕೆಣಕಿದ ಕುಮಾರಣ್ಣ

by Shwetha
July 16, 2026
0

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಯ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಯೋಜನೆಯ ಸುತ್ತ ಸೃಷ್ಟಿಯಾಗಿರುವ ವಿವಾದವೀಗ ಬಹಿರಂಗ ವಾಗ್ಯುದ್ಧಕ್ಕೆ ಕಾರಣವಾಗಿದೆ. ಇಂದು ಬೆಂಗಳೂರಿನಲ್ಲಿ ಡಿಕೆ...

ಇಂದಿನ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ

ಇಂದಿನ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ

by Shwetha
July 16, 2026
0

ಕರ್ನಾಟಕ ಸರ್ಕಾರದ ಇಂದು (16-07-2026) ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ. ಈ ಕುರಿತು ಸರ್ಕಾರದ ಸಚಿವಾಲಯದ ಸಂಪುಟ ಶಾಖೆ ಅಧಿಕೃತ ಸೂಚನೆ ಹೊರಡಿಸಿದೆ. ಮೂಲ ವೇಳಾಪಟ್ಟಿಯಂತೆ,...

ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿ- ಜೈಲನ್ನು ಅತಿಥಿ ಗೃಹ ಮಾಡಿದ್ದು ಬಿಜೆಪಿ ಸರ್ಕಾರ: ಬಿಜೆಪಿಯವರೇ ಅಂದು 8 ಖೈದಿಗಳು ಓಡಿಹೋಗಿದ್ದು ಮರೆತರೆ? ಹಳೇ ಇತಿಹಾಸ ಬಿಚ್ಚಿಟ್ಟು ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿ- ಜೈಲನ್ನು ಅತಿಥಿ ಗೃಹ ಮಾಡಿದ್ದು ಬಿಜೆಪಿ ಸರ್ಕಾರ: ಬಿಜೆಪಿಯವರೇ ಅಂದು 8 ಖೈದಿಗಳು ಓಡಿಹೋಗಿದ್ದು ಮರೆತರೆ? ಹಳೇ ಇತಿಹಾಸ ಬಿಚ್ಚಿಟ್ಟು ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 16, 2026
0

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆಯನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದಲ್ಲಿ ಭದ್ರತಾ ಲೋಪ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram