ಹೋಗಿ ಬನ್ನಿ ಎಸ್’ಪಿಬಿ ಸರ್.. ವೀ ಮಿಸ್ ಯೂ..
ಚೆನ್ನೈ, ಸೆಪ್ಟೆಂಬರ್26: ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ.. ಎಂದು ಒಂದು ಕಂಠ ಹಾಡುತ್ತಿದ್ದರೆ, ಕೋಟ್ಯಂತರ ಕಿವಿಗಳು ತಮ್ಮಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಆ ಧ್ವನಿಗೆ ಕಿವಿಗೊಡುತ್ತಿದ್ದರು. ಅದು ದಕ್ಷಿಣ ಭಾರತದ ಪ್ರತಿ ಮನೆ ಮನೆಯಲ್ಲೂ ಮೋಡಿ ಮಾಡಿರುವ ಹಾಡುಗಾರ ಎಸ್.ಪಿ. ಬಾಲಸುಬ್ರಮಣ್ಯಂ ಎಂಬ ಸ್ವರ ಮಾಂತ್ರಿಕನ ಮಾಂತ್ರಿಕ ಸ್ವರದ ಕಂಠ..
ಕನ್ನಡವೆಂದರೆ ತಲೆ ಬಾಗುತ್ತಿದ್ದ ಎಸ್ ಪಿಬಿ ಜಗ ಮರೆಯದ ನಿಜ ಕಲಾವಿದ
ಅವರ ಒಂದೊಂದು ಹಾಡೂ ಎದೆಯೊಳಗೆ ಭಾವನೆಗಳ ಸಪ್ತ ಸ್ವರದ ಮಿಡಿತವನ್ನು ಬಾರಿಸಿದೆ..
ಅಂಥದ್ದೊಂದು ಮೇರು ಪರ್ವತ ಬೆಲೆ ಕಟ್ಟಲಾಗದ ಮುತ್ತಿನಂಥಾ ಅಸಂಖ್ಯಾತ ಗೀತೆಗಳನ್ನು ನಮ್ಮ ಪಾಲಿಗೆ ನೀಡಿದ್ದಾರೆ.
ಕನ್ನಡ ಮಣ್ಣನು ಮರಿಬೇಡ ಎಂದು ಕರೆ ಕೊಟ್ಟ, ನನ್ನವರು ಯಾರೂ ಇಲ್ಲ.. ಯಾರಿಗೆ ಯಾರೂ ಇಲ್ಲ ಎಂದು ವೇದಾಂತವನ್ನು ಹಾಡಿದ, ನೂರೊಂದು ನೆನಪು ಎದೆಯಾಳದಿಂದ ಮಧುರ ಹಾಡಿನ ಗಾಯಕ.. ಹಾಡಿ ಹಾಡಿ ದಣಿವಾಗಿತ್ತೋ ಏನೋ, ಅವರ ಅಭಿಮಾನಿ ಸಾಗರಕ್ಕೆ ವಿದಾಯ ಹಾಡಿ ಬಾರದ ಊರಿಗೆ ಹೋಗಿಯೇ ಬಿಟ್ಟರು…...
ನಿಷ್ಕರುಣೆಯ ಸಾವು ಎಲ್ಲವನ್ನೂ ಸ್ವಾಹ ಮಾಡಿಬಿಟ್ಟಿತು. ಸಂಗೀತ ಲೋಕದ ಅನಘ್ಯ ರತ್ನವನ್ನು ಕೊನೆಗೂ ತನ್ನ ಲೋಕಕ್ಕೆ ಕರೆಯಿಸಿಕೊಂಡೆ ಬಿಟ್ಟ ಅಂತಕ..
ಬಾರದ ಲೋಕಕ್ಕೆ ಗಾನಗಾರುಡಿಗ; ಎಸ್ಪಿಬಿ ಧ್ವನಿಯಾಗಿದ್ದು ಎಷ್ಟು ನಟರಿಗೆ ಗೊತ್ತೇ?
ಗಾನಲೋಕದ ಸೂರ್ಯ ಅಸ್ತಮಿಸಿರುವ ಸುದ್ದಿ ಕೇಳಿ ಕೋಟ್ಯಾಂತರ ಕರುಳು ಮಿಡಿದಿದೆ. ಈ ದುಃಖದ ಸಂದರ್ಭದಲ್ಲಿ, ಎಸ್.ಪಿಬಿಯವರ ಹಾಡಿನ ನೆನಪಿನ ಜೊತೆಗೆ ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ.. ಎಂದು ಮನಸ್ಸುಗಳು ಮೌನವಾಗಿ ರೋಧಿಸುತ್ತಿದೆ. ನಮ್ಮ ಎಸ್‌ಪಿಬಿ ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ ಖಂಡಿತವಾಗಿಯೂ ಹಾಡುಗಳ ಮೂಲಕ ಎಂದೆಂದೂ ನಮ್ಮ ಜೊತೆಗೆ ಜೀವಂತವಾಗಿರುತ್ತಾರೆ..
ಎಸ್‌ಪಿಬಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಚೆನ್ನೈನ ಸತ್ಯಂ ಥಿಯೇಟರ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ರಾತ್ರಿಯಿಂದಲೇ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಬೆಳಿಗ್ಗೆ 9 ಗಂಟೆಯವರೆಗೆ ಇರಿಸಲಾಗುತ್ತದೆ. ಆ ಬಳಿಕ ಬೆಳಿಗ್ಗೆ 11 ಗಂಟೆಗೆ ಎಸ್.ಪಿಬಿ ಯವರ ನೆಚ್ಚಿನ ರೆಡ್ ಹಿಲ್ಸ್ ಫಾರಂ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅವರ ಪುತ್ರ ಚರಣ್ ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ ಎಂದು ಮಾಹಿತಿಗಳು ತಿಳಿಸಿದೆ.
ಬದುಕಿನ ಪೂರ್ತಿ ಅನೇಕ ಗುರುಗಳು; ಯಶ ಸಿಕ್ಕ ನಂತರ ಶಾಸ್ತ್ರೀಯ ಸಂಗೀತ ಕಲಿಕೆ – ಇದು ಎಸ್ ಪಿ ಬಿ ಯಶೋಗಾಥೆ
ನಗುನಗುತ ಜಗತ್ತನ್ನೇ ಗೆದ್ದ ಸಂಗೀತ ಲೋಕದ ವಿಶಾರದ..
ಅನಂತವಾಗಿ ಪಸರಿಸುತಿರಲಿ ನಿಮ್ಮ ಸುಶಾಂತ ನಿನಾದ..
ಮತ್ತೊಮ್ಮೆ ಕರುನಾಡಲ್ಲಿ ಹುಟ್ಟಿ ಬಂದು ಹೂವಾಗಿ ಅರಳಿ…
ಹೋಗಿ ಬನ್ನಿ ಎಸ್’ಪಿಬಿ ಸರ್…