ಮಹಿಳಾ ಕ್ರಿಕೆಟ್ ಅನ್ನು ಬಿಸಿಸಿಐ ಕಡೆಗಣಿಸುವುದಿಲ್ಲ- ಸೌರವ್ ಗಂಗೂಲಿ ಸ್ಪಷ್ಟನೆ
ಬಿಸಿಸಿಐ ಮಹಿಳಾ ಕ್ರಿಕೆಟ್ ಅನ್ನು ಕಡೆಗಣಿಸುವುದಿಲ್ಲ. ಮಹಿಳಾ ಐಪಿಎಲ್, ಚಾಲೆಂಜಸ್ ಸೀರಿಸ್ ಟೂರ್ನಿಯನ್ನು ಸಂಘಟಿಸುತ್ತೆವೆ. ಅದೇ ರೀತಿ ಭಾರತ ಮಹಿಳಾ ತಂಡದ ತರಬೇತಿ ಶಿಬಿರನ್ನು ನಡೆಸುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಮೂಲಕ ಬಿಸಿಸಿಐ ಮಹಿಳಾ ಕ್ರಿಕೆಟ್ ಅನ್ನು ಕಡೆಗಣಿಸುವುದಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ವಿಳಂಬವಾಗಿದೆ ಅಷ್ಟೇ. ಪುರುಷರ ಐಪಿಎಲ್ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಆದ್ರೆ ಅಂತಿಮ ವೇಳಾಪಟ್ಟಿ ಇನ್ನು ನಿಗದಿಯಾಗಿಲ್ಲ. ಇದೇ ವೇಳೆ ಮಹಿಳೆಯರ ಐಪಿಎಲ್ ಟೂನಿಗೂ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ.
ಮಹಿಳಾ ಐಪಿಎಲ್ ಟೂರ್ನಿಯ ಜೊತೆಗೆ ರಾಷ್ಟ್ರಿಯ ಮಹಿಳಾ ತಂಡಕ್ಕೆ ತರಬೇತಿ ಶಿಬಿರ ನಡೆಸುವ ಯೋಜನೆ ಕೂಡ ನಮ್ಮ ಮುಂದಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ನವೆಂಬರ್ 1ರಿಂದ ನವೆಂಬರ್ 10ರವರೆಗೆ ಮಹಿಳಾ ಚಾಲೆಂಜರ್ಸ್ ಸೀರಿಸ್ ಟೂರ್ನಿಯನ್ನು ಆಯೋಜನೆ ಮಾಡುವ ಪ್ಲಾನ್ ಇದೆ. ಇದಕ್ಕಿಂತ ಮುನ್ನ ತರಬೇತಿ ಶಿಬಿರ ನಡೆಸಬೇಕಾಗಿದೆ. ಅದೇ ರೀತಿ ರಾಷ್ಟ್ರೀಯ ಗುತ್ತಿಗೆ ಪಡೆದ ಆಟಗಾರ್ತಿಯರ ತರಬೇತಿ ಶಿಬಿರವನ್ನು ನಡೆಸಬೇಕಾಗುತ್ತದೆ. ಆದ್ರೆ ಕೋವಿಂಡ್ ನಿಂದಾಗಿ ವಿಳಂಬವಾಗುತ್ತಿದೆ. ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಗಂಗೂಲಿ ತಿಳಿಸಿದ್ರು.
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕೂಡ ಸ್ಥಗಿತಗೊಂಡಿದೆ. ಕೋವಿಡ್ -19 ಸೋಂಕಿನಿಂದ ಭಾರತದಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತಿಲ್ಲ. ಆದ್ರೆ ನಾವು ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೂ ತರಬೇತಿ ಶಿಬಿರವನ್ನು ನಡೆಸುತ್ತೆವೆ ಎಂದು ನಾನು ಹೇಳಬಲ್ಲೇ ಅಂತಾರೆ ದಾದಾ
ಈ ನಡುವೆ, 2021ರ ನ್ಯೂಜಿಲೆಂಡ್ ವಿಶ್ವಕಪ್ ಮುನ್ನ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಗೂ ಯೋಜನೆ ಬಿಸಿಸಿಐ ಯೋಜನೆ ಹಾಕಿಕೊಳ್ಳಲಿದೆ.