Gol Gumbaz -ವಿಜಯಪುರ:ಗೋಳಗುಮ್ಮಟದಲ್ಲಿ ವ್ಯಕ್ತಿಯೋಬ್ಬ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ
ವೀಕ್ಷಣೆಗೆ ಹೋಗಿದ್ದ ವ್ಯಕ್ತಿಯೊಬ್ಬ ಗೋಳಗುಮ್ಮಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಲೀಂ ತಿಕೋಟ್ಕರ್ (55) ಎಂದು ಗುರುತಿಸಲಾಗಿದೆ . ಸಲೀಂ ತಿಕ್ಕೋಟ್ಕರ್ ಗೋಳಗುಮ್ಮಟದ ನೋಡಲೆಂದು ಬಂದಿದ .
ಎಲ್ಲರ ಜೊತೆ ಸಾಲಿನಲ್ಲಿ ನಿಂತು ಅಂತಸ್ತಿನ ಮೇಲ್ಭಾಗಕ್ಕೆ ತೆರಳಿದ್ದಾನೆ . ಈ ವೇಳೆ ಗೋಳಗುಮ್ಮಟದ ಅಂತಸ್ತಿನ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ .
ಘಟನೆ ನಡೆದ ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಲೀಂ ಆತ್ಮಹತ್ಯೆ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ.








