ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಅಗ್ಗ
ಹೊಸದಿಲ್ಲಿ, ಫೆಬ್ರವರಿ28: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಯುತ್ತಲೇ ಇದೆ. ಶುಕ್ರವಾರ ಚಿನ್ನ 10 ಗ್ರಾಂಗೆ 342 ರೂ. ಕಡಿಮೆಯಾಗಿದ್ದು ಈ ಮೂಲಕ 45,599 ರೂ.ಗೆ ಇಳಿಕೆಯಾಗಿದ್ದರೆ, ಬೆಳ್ಳಿಯ ದರವು 2,007 ರೂ ಅಗ್ಗವಾಗಿದ್ದು ಕೆ.ಜಿ.ಗೆ 67,419 ರೂ.ಗೆ ಇಳಿಕೆಯಾಗಿದೆ.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಮಾರಾಟದಿಂದಾಗಿ ಚಿನ್ನ ಮತ್ತು ಬೆಳ್ಳಿ ಎರಡೂ ಶುಕ್ರವಾರ ಅಗ್ಗವಾಗಿದ್ದವು. ಗುರುವಾರ, 10 ಗ್ರಾಂಗೆ ಚಿನ್ನ 45,941 ರೂ ಆಗಿತ್ತು. ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆಜಿ ಬೆಳ್ಳಿ ದರ 69,426 ರೂ ಆಗಿತ್ತು.
ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನವು 10 ಸಾವಿರ ರೂಪಾಯಿಗಳಷ್ಟು ಅಗ್ಗವಾಗಿದೆ. ಕೊರೋನಾ ಬಿಕ್ಕಟ್ಟಿನಲ್ಲಿ ಚಿನ್ನದ ದರ 55 ಸಾವಿರ ರೂಪಾಯಿಗಳನ್ನು ತಲುಪಿತ್ತು. ಕೊರೋನಾ ಲಸಿಕೆ ಪರಿಚಯಿಸಿದಾಗಿನಿಂದಲೂ ಚಿನ್ನದ ಬೆಲೆ ಇಳಿಮುಖವಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ವ್ಯಾಕ್ಸಿನೇಷನ್ ನಂತರ ಆರ್ಥಿಕ ಚಟುವಟಿಕೆಯು ವೇಗವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಫೆಬ್ರವರಿ 27 ಶನಿವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,850 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 48,930 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿಯ ದರವು ಕೆಜಿಗೆ 67,500 ರೂಪಾಯಿಗೆ ತಲುಪಿದೆ
ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವ ನೈಸರ್ಗಿಕ ಆಹಾರಗಳು https://t.co/JshI31kFR4
— Saaksha TV (@SaakshaTv) February 24, 2021
ಮಗುವಿಗೆ/ನವಜಾತ ಶಿಶುವಿಗೆ ಆಧಾರ್ ಕಾರ್ಡ್ ನೋಂದಣಿ ಮಾಡಲು ಈ ಹಂತಗಳನ್ನು ಅನುಸರಿಸಿ https://t.co/DQLtIpEZl0
— Saaksha TV (@SaakshaTv) February 24, 2021
ಕಡಲೆಕಾಯಿ/ನೆಲಗಡಲೆ/ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ https://t.co/4XKj4biGrS
— Saaksha TV (@SaakshaTv) February 22, 2021