ಚಿನ್ನದ ಬೆಟ್ಟ ಪತ್ತೆ.. ಮುಗಿಬಿದ್ದ ಜನ… ಸಿಕ್ಕಿದವರಿಗೆ ಸೀರುಂಡೆ
ಪ್ರಿಟೋರಿಯಾ : ಆಫ್ರಿಕಾದ ಕಾಂಗೋ ರಾಜ್ಯದ ಲೂಹಿಹಿಯಲ್ಲಿ ಚಿನ್ನದ ಬೆಟ್ಟವೊಂದು ಪತ್ತೆಯಾಗಿದ್ದು, ಚಿನ್ನಕ್ಕಾಗಿ ಜನ ಮುಗಿಬಿದಿದ್ದಾರೆ.
ಬೆಟ್ಟದ ಮಣ್ಣಿನಲ್ಲಿ ಅಪಾರ ಪ್ರಮಾಣದ ಚಿನ್ನದ ಅಂಶ ಇದೆ ಅನ್ನೋದನ್ನ ತಿಳಿಯುತ್ತಿದ್ದಂತೆ ಬೆಟ್ಟದಲ್ಲಿ ಜನಸಾಗರವೇ ಸೇರಿದೆ.
ಜನರು ಹಾರೆ, ಗುದ್ದಲಿ ತಂದು ಅಲ್ಲಿದ್ದ ಮಣ್ಣನ್ನು ಅಗೆದು ತೆಗೆದುಕೊಂಡು ಹೋಗುತ್ತಿದ್ದಾರೆ.
ಇನ್ನ ಚಿನ್ನದ ಬೆಟ್ಟ ಪತ್ತೆಯಾಗಿದೆ ಅನ್ನೋದು ಮಿಂಚಿನ ವೇಗದಲ್ಲಿ ಬೇರೆ ಬೇರೆ ಪ್ರದೇಶಗಳಿಗೂ ಹರಡಿದ್ದು, ಚಿನ್ನಕ್ಕಾಗಿ ವಿವಿಧ ಭಾಗಗಳಿಂದಲೂ ಲೂಹಿಹಿಗೆ ಆಗಮಿಸುತ್ತಿದ್ದಾರಂತೆ.
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅಲ್ಲಿನ ಸರ್ಕಾರ ಆ ಭಾಗದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಯಾರೋಬ್ಬರು ಹಾರೆ, ಗುದ್ದಲಿಯಿಂದ ಅಗೆಯುವಂತಿಲ್ಲ ಎಂದು ಸೂಚಿಸಿದೆ.
ಇತ್ತ ಜನರು ಚಿನ್ನಕ್ಕಾಗಿ ಅಗೆಯುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.