‘ಸಖತ್’ ಸಿನಿಮಾದ ಟೈಟಲ್ ಹಾಡು ರಿಲೀಸ್..!
ಬೆಂಗಳೂರು : ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಸಖತ್” ಸಿನಿಮಾದ ಟೀಸರ್ ರಿಲೀಸ್ ಆಗಿತ್ತು.. ಈ ಟೀಸರ್ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ.. ಸಿನಿಮಾದಲ್ಲಿ ಗಣೇಶ್ ಅವರು ದಿವ್ಯಾಂಗರ ರೂಪದಲ್ಲಿ ಕಾಣಿಸಿಕೊಂಡಿದ್ದು , ಇದೇ ಮೊದಲ ಬಾರಿಗೆ ಈ ರೀತಿಯಾದ ಪಾತ್ರಕ್ಕೆ ಬಣ್ಣ ಹಚ್ಚಿರೋದು ವಿಶೇಷ..
ಕೊನೆಗೂ ಸರ್ಕಾರದ ಮಧ್ಯಸ್ಥಿಕೆ ನಂತರ ಘೋಷಣೆಯಾಯ್ತು “ಮರಕ್ಕರ್” ರಿಲೀಸ್ ಡೇಟ್..!
ಈ ಸಿನಿಮಾ ಜನರನ್ನ ಸಖತ್ ಎಂಟರ್ ಟೈನ್ ಜೊತೆಗೆ ನಕ್ಕಿ ನಗಿಸಲಿದೆ ಅನ್ನೋದಕ್ಕೆ ಆ ಟೀಸರ್ ಸಾಕ್ಷಿ.. ಇದರ ಬೆನ್ನಲ್ಲೇ ಸಿನಿಮಾ ತಂಡ ಗೋಲ್ಡನ್ ಸ್ಟಾರ್ ಫ್ಯಾನ್ಸ್ ಗೆ ಖುಷಿ ನೀಡಿದೆ.. ಗಣೇಶ್ ಮತ್ತೆ ಸಿಂಪಲ್ ಸುನಿ ಕಾಂಬಿನೇಷನ್ ನ ಸಖತ್ ಸಿನಿಮಾದ ಟೈಟಲ್ ಹಾಡು ರಿಲೀಸ್ ಆಗಿದೆ.. ಈ ಹಾಡು ತುಂಬಾನೇ ವಿಭಿನ್ನವಾಗಿದ್ದು, ಜನರ ಗಮನ ಸೆಳೆಯುತ್ತಿದೆ.. ಹಾಡಿನಲ್ಲಿ ಜಗ್ಗೇಶ್ ರ್ಯಾಪರ್ ಆಗಿ ಕಾಣಿಸಿಕೊಂಡಿದ್ದು, ಮೈಕ್ ಹಿಡಿದು ಹಾಡುತ್ತಾರೆ.. ಆಗಾಗ ಡ್ಯಾನ್ಸ್ ಕೂಡ ಮಾಡಿದ್ದು ಸಾಂಗ್ ಅಭ್ದುತವಾಗಿ ಮೂಡಿ ಬಂದಿದೆ..