ಕೊನೆಗೂ ಸರ್ಕಾರದ ಮಧ್ಯಸ್ಥಿಕೆ ನಂತರ ಘೋಷಣೆಯಾಯ್ತು “ಮರಕ್ಕರ್” ರಿಲೀಸ್ ಡೇಟ್..!

1 min read

ಕೊನೆಗೂ ಸರ್ಕಾರದ ಮಧ್ಯಸ್ಥಿಕೆ ನಂತರ ಘೋಷಣೆಯಾಯ್ತು “ಮರಕ್ಕರ್” ರಿಲೀಸ್ ಡೇಟ್..!ಕೇರಳ :

ಸಾಕಷ್ಟು ಅಡಚಣೆಗಳನ್ನ ಎದುರಿಸಿದ ನಂತರ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಕೊನೆಗೂ ಮಲಯಾಳಂನ ಬಹುನಿರೀಕ್ಷೆಯ ಸಿನಿಮಾ ‘ಮರಕ್ಕರ್ : ಅರಬ್ಬಿ ಕಡಲಿಂಟೆ ಸಿಂಹಂ’ ಸಿಂಹಂ ಸಿನಿಮಾದ ರಿಲೀಸ್ ದಿನಾಂಕ ಘೋಷಣೆಯಾಗಿದೆ..ಮಾಲಿವುಡ್ ನ ಸ್ಟಾರ್ ನಟ ಮೋಹನ್ ಲಾಲ್ ಅವರ ನಟನೆಯ ಈ ಸಿನಿಮಾದ ಶೂಟಿಂಗ್ ಮುಗಿದೇ ಸುಮಾರು 3 ವರ್ಗಳು ಕಳೆದಿದೆ.

ಆದ್ರೆ ರಿಲೀಸ್ ಭಾಗ್ಯ ಕೂಡಿಬಂದಿಲ್ಲ.. ಹೀಗಾಗಿ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳು ಬೇಸರಗೊಂಡಿದ್ದರು.. ಕೊನೆಗೂ ಅವರಿಗೆ ಸಿನಿಮಾ ತಂಡ  ಗುಡ್ ನ್ಯೂಸ್ ಕೊಟ್ಟಿದೆ..ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.. ಇಂತಹ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಜನರಿಂದ ಚಪ್ಪಾಳೆ ಹೊಡಿಸಿಕೊಳ್ಳಲು ಅರ್ಹವಾಗಿದೆ. ಮತ್ತೊಂದೆಡೆ ಒಟಿಟಿಯಲ್ಲಿ ರಿಲೀಸ್ ಆದ್ರೂ ಭಾರತೀಯ ಅದ್ರಲ್ಲೂ ದಕ್ಷಿಣ ಭಾರತದ ಸಿನಿಮಾದ ಶ್ರೀಮಂತಿಕೆಯನ್ನ ವಿಶ್ವಾದ್ಯಂತ ಪಸರಿಸಬಹುದು.. ಆದ್ರೆ ಇದೇ ಒಟಿಟಿ ಥಿಯೇಟರ್ ರಿಲೀಸ್ ಗೆ ವಾದ ವಿವಾದಗಳು ಸೇರಿ ನಾನಾ ಕಾರಣಗಳಿಂದ ಸಿನಿಮಾ ರಿಲೀಸ್  ತಡವಾಗಿದೆ..

ಈ ನಡುವೆ ರಿಲೀಸ್ ಡೇಟ್ ಘೋಷಣೆ ಆಗಿದೆ.. 2018 ರಲ್ಲಿ ಚಿತ್ರೀಕರಣ ಆರಂಭಿಸಿದ ‘ಮರಕ್ಕರ್’ ಸಿನಿಮಾ 2019 ರಲ್ಲಿ ಚಿತ್ರೀಕರಣ ಮುಗಿಸಿ ಅದೇ ವರ್ಷದಲ್ಲಿ ಸೆನ್ಸಾರ್ ಸಹ ಪೂರ್ಣಗೊಳಿಸಿ ಬಿಡುಗಡೆಗೆ ತಯಾರಾಗಿತ್ತು. ಆದರೆ, ಕೊರೊನಾ ಕಾರಣದಿಂದ ಸಿನಿಮಾದ ಬಿಡುಗಡೆ ತಡವಾಯ್ತು. ಇದೀಗ ಡಿಸೆಂಬರ್ 02 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ.

‘ಮರಕ್ಕರ್’ ಸಿನಿಮಾವು ಡಿಸೆಂಬರ್ 02 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.ಕೇರಳದ ಮೊದಲ 100 ಕೋಟಿ ಬಜೆಟ್‌ನ ಸಿನಿಮಾ ಇದಾಗಿದ್ದು, ಮೋಹನ್‌ ಲಾಲ್‌ ರ ಆಪ್ತ ಸ್ನೇಹಿತ ಆಂಟೊನಿ ಪೆರುಂಬವೂರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕೇರಳದ ಮೊದಲ ಭಾರೀ ಬಜೆಟ್ ಸಿನಿಮಾ ಆಗಿರೋದ್ರಿಂದ ಸಿನಿಮಾ ಮೇಲೆ ಸಾಕಷ್ಟು ನೀರೀಕ್ಷೆಯಿದೆ..

ಅಷ್ಟೇ ಅಲ್ಲ ಇಷ್ಟು ಬಿಗ್ ಬಜೆಟ್ ನ ಜೊತೆಗೆ ಉತ್ತಮ ಕಥೆ , ಸ್ಕ್ರೀನ್ ಪ್ಲೇ ಹೊಂದಿರುವ ಸಿನಿಮಾವನ್ನ ಕೇರಳ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಮಾಡಿ  ಅದ್ಧೂರಿಯಾಗಿ ಪ್ರದರ್ಶನ ಕಾಣುವಂತೆ ಮಾಡುವುದು ನಿರ್ಮಾಪಕರ ಉದ್ದೇಶವಾಗಿತ್ತು.  ಅಲ್ಲದೇ ಚಿತ್ರಮಂದಿರಗಳಿಂದ ಹಾಗೂ ವಿತರಕರಿಂದ ಹೆಚ್ಚಿನ ಹಣವನ್ನು ನಿರ್ಮಾಪಕರು ನಿರೀಕ್ಷೆ ಮಾಡಿದ್ದರು.

ಮತ್ತೊಂದೆಡೆ ಒಟಿಟಿ ಜೊತೆಗೆ ಬೃಹತ್ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡು ಮುಂಗಡವಾಗಿ 40 ಕೋಟಿ ಹಣವನ್ನು ನಿರ್ಮಾಪಕರು ಸಂಗ್ರಹಿಸಿದ್ದರು.  ಆದರೂ ಚಿತ್ರಮಂದಿರದವರು ಹೆಚ್ಚಿನ ಅಡ್ವಾನ್ಸ್ ಹಣ ನೀಡಲು ಹಿಂದೇಟು ಹಾಕಿದರು. ಹಾಗೂ ಕೇರಳದ ಎಲ್ಲ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡುವುದು ಸಹ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.  ಹೀಗಾಗಿ ನಿರ್ಮಾಪಕರು, ತಾವು ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡುವುದಾಗಿ ಹೇಳಿ ಒಟಿಟಿ ಜೊತೆ ಭಾರಿ ಮೊತ್ತಕ್ಕೆ ಒಪ್ಪಂದ ಸಹ ಮಾಡಿಕೊಂಡರು.

ಇದಕ್ಕೆ ಚಿತ್ರಮಂದಿರ ಸಂಘ ಹಾಗೂ ವಿತರಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸರ್ಕಾರವೂ ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.  ನಂತರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮೋಹನ್‌ಲಾಲ್, ಆಂಟೊನಿ ಪೆರುಂಬವೂರ್ ಹಾಗೂ ಚಿತ್ರಮಂದಿರಗಳ ಸಂಘ, ವಿತರಕರ ಸಂಘದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಲ್ಲಿ ಕೊಂಚ ಮಟ್ಟಿನ ಯಶಸ್ಸು ಸಾಧಿಸಿದೆ..

ಕೊನೆಗೂ ಸಿನಿಮಾ ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗುವಂತೆ ಮಾಡಿದೆ..  ಇನ್ನೂ ‘ಮರಕ್ಕರ್’ ಸಿನಿಮಾದಿಂದ ಸರ್ಕಾರಕ್ಕೂ ಲಾಭವಿದೆ..  ಈ ಸಿನಿಮಾದಿಂದಲೇ ಸುಮಾರು 35 ಕೋಟಿ ರೂ. ತೆರಿಗೆ ಸರ್ಕಾರಕ್ಕೆ ಸೇರುತ್ತದೆ ಎನ್ನಲಾಗುತ್ತಿದೆ. ಅಲ್ಲದೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಚಿತ್ರಮಂದಿರಗಳು ಕೊರೊನಾ ಕಾರಣಕ್ಕೆ ಭಾರಿ ನಷ್ಟದಲ್ಲಿವೆ. ಬಹಳ ತಡವಾಗಿ ಅಲ್ಲಿ ಚಿತ್ರಮಂದಿರಗಳು ತೆರೆಯಲು ಅವಕಾಶ ನೀಡಲಾಗಿದೆ.

ಹೀಗಿಗಾಇ ಚಿತ್ರಮಂದಿರಗಳ ಪುನಶ್ಚೇತನಕ್ಕೆ ‘ಮರಕ್ಕರ್’ ನಂತಹ ಸಿನಿಮಾಗಳು ನೆರವಾಗಲಿದೆ ಎಂಬುದು ಈ ನಿರ್ಧಾರಕ್ಕೆ ಮುಖ್ಯ ಉದ್ದೇಶವೂ ಆಗಿದೆ.. ‘ಮರಕ್ಕರ್’ ಸಿನಿಮಾದಲ್ಲಿ ಮೋಹನ್‌ಲಾಲ್ ನಾಲ್ಕನೇ ಕುಂಜಳಿ ಮರಕ್ಕರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದು, ಸಿನಿಮಾದಲ್ಲಿ ಅರ್ಜುನ್ ಸರ್ಜಾ, ಸುನಿಲ್ ಶೆಟ್ಟಿ, ಕೀರ್ತಿ ಸುರೇಶ್, ಸೇರಿದಂತೆ ಹಲವು ಸ್ಟಾರ್ ನಟರು ಬಣ್ಣ ಹಚ್ಚಿದ್ದಾರೆ.

ರಾಜ್ಯೋತ್ಸವ ತಿಂಗಳಿನಲ್ಲಿ ಸಿನಿಪ್ರೇಮಿಗಳಿಗೆ ಬರೋಬ್ಬರಿ ೧೬ ಚಿತ್ರಗಳ ಸಿನಿಮೇಳ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd