ಚಿತ್ರರಂಗದಲ್ಲಿ ‘ಭೀಮ’ ಚಿತ್ರ ಅಬ್ಬರಿಸುತ್ತಿದೆ. ಈ ಮಧ್ಯೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಿಡುಗಡೆ ಆಗಲಿದೆ.
ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿವೆ. ಈ ಮಧ್ಯೆ ಸಿನಿಮಾದ ಹೆಸರು, ಹಾಡುಗಳು ಹೇಳುತ್ತಿರುವಂತೆ ಇದೊಂದು ರೊಮ್ಯಾಂಟಿಕ್ ಆಗಿದೆ. ಸಿನಿಮಾದಲ್ಲಿ ಒಳ್ಳೆಯ ಕಾಮಿಡಿ ಸಹ ಇರಲಿದೆ ಎನ್ನಲಾಗುತ್ತಿದೆ. ಸಿನಿಮಾದ ವಿಶೇಷತೆಯೆಂದರೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾನಲ್ಲಿ ಗಣೇಶ್ಗೆ ಒಬ್ಬಿರು ಸಖಿಯರಿಲ್ಲ ಬದಲಿಗೆ ಬರೋಬ್ಬರಿ ಎಂಟು ಮಂದಿ ಸಖಿಯರಿದ್ದಾರಂತೆ. ಏನಿದರ ಹಕೀಕತ್ತು? ಹೀಗಾಗಿ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.