ಬಿಪಿಎಲ್ ಕಾರ್ಡ್ ದಾರರಿಗೆ ಇಲ್ಲಿದೆ ಗುಡ್ ನ್ಯೂಸ್ : 5 ಕೆ.ಜಿ ಅಕ್ಕಿ ಉಚಿತ
ಬೆಂಗಳೂರು: ಕೋವಿಡ್ 2ನೇ ಅಲೆ ನಡುವೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಇದ್ರಿಂದಾಗಿ ಮಧ್ಯಮವರ್ಗದವರು ಬಡವರು ತೊಂದರೆ ಅನುಭವಿಸುವಂತಾಗಿದೆ.. ಹೀಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ 2021ರ ಮೇ ಮತ್ತು ಜೂನ್ ತಿಂಗಳಿಗೆ ನಾಲ್ಕು ಕೋಟಿ ಟಿಪಿಡಿಎಸ್ ಕಾರ್ಡ್ ಹೊಂದಿರುವ ಸದಸ್ಯರಿಗೆ ತಿಂಗಳಿಗೆ ತಲಾ 5 ಕೆ.ಜಿ.ಅಕ್ಕಿ ಯನ್ನು ಉಚಿತವಾಗಿ ರಾಜ್ಯಗಳಿಗೆ ನೀಡಲಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಾಜ್ಯದ ಬಡವರಿಗೆ ಹಂಚುವ ಪಡಿತರ ವಿತರಣೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಚಿವ ಉಮೇಶ್ ಕತ್ತಿ ಸುದ್ದಿ ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಪಡಿತರ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದು, ಇಲಾಖೆಯಿಂದ ಪಡಿತರ ಚೀಟಿಯನ್ನು ವಿತರಿಸಲು ಪರಿಶೀಲನೆ ಹಂತದಲ್ಲಿ ಇದ್ದಲ್ಲಿ ಅವರಿಗೆ ಸಹ ಈ ಪ್ರಯೋಜನ ಸಿಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ಉಚಿತ ಅಕ್ಕಿಯನ್ನು ಭಾರತೀಯ ಆಹಾರ ನಿಗಮದ ಗೋಡನ್ ಗಳಿಂದ ಪಡೆದುಕೊಳ್ಳುವುದನ್ನು ಆರಂಭಿಸಿದೆ.ಈಗಾಗಲೇ ಇಂದಿನವರೆಗೆ 40 ಕೋಟಿಯ 193 ಕೆ.ಜಿ. ಆಹಾರ ಧಾನ್ಯದಲ್ಲಿ 1 ಕೋಟಿ 43 ಲಕ್ಷ ಕೆ.ಜಿ. ಅಕ್ಕಿಯನ್ನು ಭಾರತೀಯ ಆಹಾರ ನಿಗಮದ ಗೋಡನ್ ನಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಚಿತವಾಗಿ ಪಡೆದು ಕೊಳ್ಳಲಾರಂಭಿಸಿದೆ.