ಕ್ಯಾನ್ಸರ್ ರೋಗಿಗಳಿಗೆ ಅಭಿವೃದ್ಧಿ ಪಡಿಸಿದ ಪ್ರತಿಕಾಯ ಆಧಾರಿತ ಚಿಕಿತ್ಸೆಗೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅನುಮೋದನೆ ನೀಡಿದೆ ಎಂದು ಜಾನ್ಸನ್ ಆಂಡ್ ಜಾನ್ಸನ್ ಹೇಳಿದೆ.
ಕಂಪನಿಯು ತಯಾರಿಸಿದ ಟಾಲ್ವಿ ಚುಚ್ಚುಮದ್ದನ್ನು ವಾರಕ್ಕೊಮ್ಮೆ ಅಥವಾ ಎರಡು ವಾರಗಳಿಗೊಮ್ಮೆ ರೋಗಿಗಳಿಗೆ ನೀಡುವುದರಿಂದ ರೋಗಿಯ ದೇಹದಲ್ಲಿ ಪ್ರತಿಕಾಯಗಳು ರೂಪುಗೊಳ್ಳಬಹುದು ಮತ್ತು ಈ ಚಿಕಿತ್ಸೆಯಲ್ಲಿ ಪ್ರತಿ ರಕ್ಷಣಾ ವ್ಯವಸ್ಥೆಯು ಕ್ಯಾನ್ಸರ್ ಕೋಶವನ್ನು ಕೊನೆಗಳಿಸುತ್ತದೆ. ರಕ್ತದ ಕ್ಯಾನ್ಸರ್ ರೋಗಿಗಳಲ್ಲಿ ಟಾಲ್ವಿ ಚುಚ್ಚುಮದ್ದಿನ ಮೂಲಕ ನೀಡಲಾಗಿರುವ ಚಿಕಿತ್ಸೆಗೆ ಯುಎಸ್ ಎಫ್ಡಿಎಯಿಂದ ಅನಮೋದನೆ ಸಿಕ್ಕಿದೆ ಎಂದು ಕಂಪನಿಯೇ ಸ್ವತಃ ಹೇಳಿದೆ.








