ಟಾಟಾ ಮೋಟಾರ್ಸ್ (Tata Motors) ಕಂಪನಿಯು ಕಾರು ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
‘ಫೆಸ್ಟಿವಲ್ ಆಫ್ ಕಾರ್ಸ್ (Festival of Cars) ಅಭಿಯಾನದ ಅಂಗವಾಗಿ ತನ್ನ ಎಲೆಕ್ಟ್ರಿಕ್ ಕಾರುಗಳ (Electric Cars) ಬೆಲೆಯನ್ನು 3 ಲಕ್ಷದವರೆಗೆ ಕಡಿತ ಮಾಡಿದೆ. ಹೀಗಾಗಿ ಕಾರು ಪ್ರಿಯರು ಸಖತ್ ಸಂಭ್ರಮಿಸುತ್ತಿದ್ದಾರೆ. ಈ ಅಭಿಯಾನ ಅಕ್ಟೊಬರ್ 31ರ ವರೆಗೆ ಇರಲಿದೆ ಎನ್ನಲಾಗಿದೆ.
ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತವಾಗಿದೆ. ನೆಕ್ಸಾನ್ ಇವಿ: ಬೆಲೆ ಕಡಿತ 3 ಲಕ್ಷ ರೂ.ವರೆಗೆ ಕಡಿತವಾಗಿದೆ. ಹೀಗಾಗಿ ಬೆಲೆ ಕಡಿತದ ನಂತರ ನೆಕ್ಸಾನ್ ಇವಿ ಕಾರಿನ ಬೆಲೆ 12,49,900 – 16,99,900 ರೂ. ವರೆಗೆ ಇದೆ. ಪಂಚ್ ಇವಿ: ಬೆಲೆ ಕಡಿತ 1.20 ಲಕ್ಷ ರೂ. ಬೆಲೆ ಕಡಿತದ ನಂತರ ಪಂಚ್ ಇವಿ ಕಾರಿನ ಬೆಲೆ 9,99,000 – 14,28,999 ರೂಪಾಯಿವರೆಗೆ ಇದೆ.
ಟಿಯಾಗೋ ಇವಿ: ಬೆಲೆ ಕಡಿತ 80 ಸಾವಿರ ರೂ. ವರೆಗೆ ಕಡಿತವಾಗಿದೆ. ಬೆಲೆ ಕಡಿತದ ನಂತರ ಟಿಯಾಗೋ ಇವಿ ಕಾರಿನ ಬೆಲೆ 7,99,000 – 11,49,000 ರೂಪಾಯಿವರೆಗೆ ಇದೆ. ಬೆಲೆ ಕಡಿತದ ಜೊತೆ ಗ್ರಾಹಕರು ದೇಶದಾದ್ಯಂತ 5,500 ಟಾಟಾ ಪವರ್ ಚಾರ್ಜಿಂಗ್ ಪಾಯಿಂಟ್ ಗಳಲ್ಲಿ 6-ತಿಂಗಳ ಉಚಿತ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಹಬ್ಬದ ಕೊಡುಗೆಯು 31ನೇ ಅಕ್ಟೋಬರ್ 2024 ರವರೆಗೆ ಮಾತ್ರ ಲಭ್ಯವಿರುವುದರಿಂದ ಗ್ರಾಹಕರು ತಮ್ಮ ನೆಚ್ಚಿನ EV ಕಾರನ್ನು ಉತ್ತಮ ಬೆಲೆಯಲ್ಲಿ ಖರೀದಿಸಬಹುದು ಎಂದು ಕಂಪನಿ ಸೂಚಿಸಿದೆ. ಈ ಸುದ್ದಿ ಕೇಳಿ ಹಲವಾರು ಗ್ರಾಹಕರು ಸಂಭ್ರಮಿಸುತ್ತಿದ್ದಾರೆ.








