ಕೇಂದ್ರ ಸರ್ಕಾರದ ಕೈಗಾರಿಕಾ ನೌಕರರಿಗೆ ಸಿಹಿ ಸುದ್ದಿ..!
ನವದೆಹಲಿ : ಕೇಂದ್ರ ಸರ್ಕಾರದ ಕೈಗಾರಿಕಾ ನೌಕರರಿಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸಿಹಿ ಸುದ್ದಿನೀಡಿದ್ದು, ತುಟ್ಟಿಭತ್ಯೆ (ಡಿಎ) ಹೆಚ್ಚಿಸಿರುವುದಾಗಿ ತಿಳಿಸಿದೆ.
ಸದ್ಯ ಕೇಂದ್ರ ಕೈಗಾರಿಕಾ ನೌಕರರಿಗೆ ಮಾಸಿಕವಾಗಿ 105 ರೂ. ತುಟ್ಟಿಭತ್ಯೆ ನೀಡಲಾಗುತ್ತಿತ್ತು.
ಇದನ್ನ ಈಗ 210 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ದೇಶಾದ್ಯಂತ 1.50 ಕೋಟಿ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.
ಈ ಹೆಚ್ಚಳವು ಏಪ್ರಿಲ್ 1ರಿಂದ ಪೂರ್ವಾನ್ವಯವಾಗಿ ಜಾರಿಯಾಗಲಿದ್ದು, ಇದು ನೌಕರರ ಕನಿಷ್ಠ ವೇತನದ ದರ ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರದ ರೈಲ್ವೆ ಆಡಳಿತ, ಗಣಿಗಳು, ತೈಲ ವಲಯ, ಪ್ರಮುಖ ಬಂದರುಗಳು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದಲ್ಲಿರುವ ಸಂಸ್ಥೆಗಳ ಕಾರ್ಮಿಕರು ಡಿಎ ಹೆಚ್ಚಳದ ಪ್ರಯೋಜನ ಪಡೆಯಲಿದ್ದಾರೆ.
ಅಲ್ಲದೇ ಇದು ಗುತ್ತಿಗೆ ಕಾರ್ಮಿಕರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ಕೇಂದ್ರದ ಮುಖ್ಯ ಕಾರ್ಮಿಕ ಆಯುಕ್ತ ಡಿಪಿಎಸ್ ನೇಗಿ ಮಾಹಿತಿ ನೀಡಿದ್ದಾರೆ.