ಜಿಯೋ ಪ್ರಿಪೇಯ್ಡ್ ಹೊಸ ಪ್ಲಾನ್ – 259 ರೂಗೆ ಕ್ಯಾಲೆಂಡ್ ತಿಂಗಳ ವ್ಯಾಲಿಡಿಟಿ
ರಿಲಯನ್ಸ್ ಜಿಯೋ ಇದೀಗ ಹೊಸದೊಂದು ಪ್ರಿಪೇಡ್ ಪ್ಲಾನ್ ಅನ್ನ ಪರಿಚಯಿಸಲಿದೆ. 259 ರುಪಾಯಿ ರೀಚಾರ್ಚ್ ಗೆ ಕ್ಯಾಲೆಂಡ್ ತಿಂಗಳ ಮಾನ್ಯತೆಯೊಂದಿಗೆ ಅನ್ ಲಿಮಿಟೆಡ್ ಡೇಟಾ ಮತ್ತು ಕಾಲ್ ಪ್ರಯೋಜನೆಗಳನ್ನ ನೀಡಲಿದೆ. ಈ ರೀಚಾರ್ಜ್ ನ ವಿಶೇಷವೆಂದರೆ ನೀವು ಯಾವ ದಿನಾಂಕದಂದು ರಿಚಾರ್ಜ್ ಮಾಡಿರುವಿರೋ ಮತ್ತೆ ಅದೇ ದಿನಾಂಕದಂದು ಪ್ಲಾನ್ ಅನ್ನ ನವೀಕರಿಸಬಹುದು. ಇದು ಬಳಕೆದಾರರಿಗೆ ರೀಚಾರ್ಜ್ ದಿನಾಂಕ ವನ್ನ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಉದಾಹರಣೆ ನೀವು ಏಪ್ರಿಲ್ 1 ರಂದು 259 ರುಪಾಯಿಯ ಯೋಜನೆಯನ್ನ ರೀಚಾರ್ಜ್ ಮಾಡಿದರೆ ಮುಂದಿನ ತಿಂಗಳು ಮೇ 1 ರಂದು ರೀಚಾರ್ಜ್ ಮಾಡಬಹುದು ಜೂನ್ 1 ಜುಲೈ 1 ಈ ರೀತಿ ರೀಚಾರ್ಜ್ ದಿನಾಂಕ ಬರಲಿದೆ.
ಹೊಸ ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗಾಗಿ 259 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ತರಲಾಗಿದ್ದು 1.5GB ವರೆಗೆ ಹೈ-ಸ್ಪೀಡ್ ಡೇಟಾ ಇರಲಿದೆ ನಂತರ 64Kbps ಗೆ ಇಳಿಯುತ್ತದೆ. ಅನಿಯಮಿತ ಕರೆಗಳು, ದಿನವೊದಕ್ಕೆ 100 SMS ಗಳು ಈ ಪ್ಲಾನ್ ನಲ್ಲಿ ದೊರಕಲಿದೆ.