ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆ 1 ತಿಂಗಳಲ್ಲಿ ಭರ್ತಿ – ಶ್ರೀರಾಮುಲು..
ಕಲ್ಯಾಣ ಕರ್ನಾಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನ ಒಂದು ತಿಂಗಳ ಒಳಗಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು 371 ಜೆ ಕಲಂ ಅನುಷ್ಠಾಬ ಕುರಿತು ಸಂಪುಟ ಉಪ ಸಮಿತಿ ಅಧ್ಯಕ್ಷ ಬಿ ಶ್ರೀರಾಮುಲು ತಿಳಿಸಿದ್ದಾರೆ.
ಖಾಲಿ ಇರುವ ಹುದ್ದೆಗಳು ಮತ್ತು ಬಡ್ತಿ ಆಗಬೇಕಿರುವ ಹುದ್ದೆಗಳ ಬಗ್ಗೆ ಮಾಹಿತಿ ಇದೆ ಈ ಕುರಿತು ನೇಮಕಾತಿ ಬಗ್ಗೆ ಯೋಜನಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಅವರು ವರದಿ ನೀಡಲಿದ್ದು ಒಂದು ತಿಂಗಳಲ್ಲೆ ಸ್ಥಳಿಯ ಮೀಸಲಾತಿ ಅಡಿ ಭರ್ತಿ ಮಾಡಲಾಗುವುದು ಎಂದು ಶ್ರೀರಾಮುಲು ಸಮಿತಿ ಸಭೆ ಬಳಿಕ ತಿಳಿಸಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕೌಶಲ ವಿ ವಿ ಸ್ಥಾಪಿಸುವ ಬಗ್ಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚಿಸಲಾಗಿದೆ ಇದಕ್ಕೆ ವಿಶ್ವ ವಿದ್ಯಾಲಯದ ಕುಲಪತಿಗೆ ಹೊಣೆ ನಿಡಲಾಗಿದೆ. ಇದನ್ನ ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ಸಿ ಎಂ ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.