ನವದೆಹಲಿ: ರೈಲ್ವೆ ಟಿಕೆಟ್ ಗಳ ಮುಂಗಡ ಕಾಯ್ದಿರಿಸುವಿಕೆ ವಿಷಯದಲ್ಲಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಕಾಯ್ದಿರಿಸುವಿಕೆಯ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ. ನವೆಂಬರ್ 1ರಿಂದಲೇ ಈ ನಿಯಮ ಜಾರಿಗೆ ತರಲಾಗುತ್ತಿದೆ. ಅಲ್ಲದೇ, ಟಿಕೆಟ್ ರಹಿತ ಪ್ರಯಾಣಕ್ಕೆ ರೈಲ್ವೆ ಇಲಾಖೆ ಕಡಿವಾಣ ಹಾಕಿದೆ.
ಘಜಿಯಾಬಾದ್ ಮತ್ತು ಕಾನ್ಪುರ ನಡುವಿನ ನಮ್ಮ ಇತ್ತೀಚಿನ ದಿಢೀರ್ ತಪಾಸಣೆಯಲ್ಲಿ ಯಾವುದೇ ಟಿಕೆಟ್ ಇಲ್ಲದೆ ವಿವಿಧ ಎಕ್ಸ್ಪ್ರೆಸ್ ಮತ್ತು ರೈಲುಗಳ ಎಸಿ ಕೋಚ್ಗಳಲ್ಲಿ ನೂರಾರು ಪೊಲೀಸರು ಪ್ರಯಾಣಿಸುತ್ತಿದ್ದುದನ್ನು ನಾವು ಕಂಡುಕೊಂಡಿದ್ದೇವೆ. ನಾವು ಅವರಿಗೆ ದಂಡವನ್ನು ವಿಧಿಸಿದಾಗ ಆರಂಭದಲ್ಲಿ ಅವರು ಪಾವತಿಸಲು ನಿರಾಕರಿಸಿದರು, ನಮಗೆ ಬೆದರಿಕೆ ಹಾಕಿದರು” ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಮ ಕೈಗೊಂಡಿದೆ ಎಂದು ಹೇಳಿದೆ.