ಬ್ಯಾನ್ ಆದ ಒಂದು ವರ್ಷದ ನಂತರ ಮತ್ತೆ ಪಬ್ ಜಿ ಗೇಮ್ ಭಾರತದಲ್ಲಿ ಲಭ್ಯವಾಗಲಿದೆ. ಗೇಮ್ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ(ಬಿಜಿಎಂಐ) ಕಾರ್ಯಾಚರಣೆಯನ್ನು ಪುನರಾರಂಭಿಸಲು ಭಾರತ ಸರ್ಕಾರದಿಂದ ಅನುಮೋದನೆಯನ್ನು ಪಡೆದುಕೊಂಡಿರುವುದಾಗಿ ದಕ್ಷಿಣ ಕೊರಿಯಾದ ಬೃಹತ್ ತಂತ್ರಜ್ಞಾನ ಕಂಪನಿ ಕ್ರಾಫ್ಟನ್ ಶುಕ್ರವಾರ ಪ್ರಕಟಿಸಿದೆ. ಗೇಮ್ ಶೀಘ್ರದಲ್ಲಿಯೇ ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಡೌನ್ ಲೋಡ್ ಗೆ ಲಭ್ಯವಾಗಲಿದೆ.
ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಕಾರ್ಯಾಚರಣೆಯನ್ನು ಪುನರಾಂರಂಭಿಸಲು ನಮಗೆ ಅನುಮತಿ ನೀಡಿದ್ದಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಕೃತಜ್ಞರಾಗಿದ್ದೇವೆ. ಕಳೆದ ಕೆಲವು ತಿಂಗಳುಗಳಿಂದ ನಮ್ಮ ಭಾರತೀಯ ಗೇಮಿಂಗ್ ಸಮುದಾಯದ ಬೆಂಬಲ ಮತ್ತು ತಾಳ್ಮೆಗಾಗಿ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ ಎದು ಕ್ರಾಫ್ಟನ್ ಇಂಡಿಯಾದ ಸಿಇಓ ಹ್ಯುನಿಲ್ ಸ್ನೋಹ್ನ ಹೇಳಿದ್ದಾರೆ.
ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಶೀಘ್ರದಲ್ಲಿಯೇ ಡೌನ್ ಲೋಡ್ ಗೆ ಲಭ್ಯವಾಗಲಿದೆ ಎಂಬುವುದನ್ನು ತಿಳಿಸಲು ಖುಷಿಯಾಗುತ್ತಿದೆ. ನಮ್ಮ ಪ್ಲಾಟ್ ಫಾರ್ಮ್ ಗೆ ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದೇವೆ. ಎಂದು ಕೂಡ ಅವರು ಹೇಳಿದ್ದಾರೆ.