ಹೆಚ್ಚು ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ವಾಟ್ಸ್ ಆಪ್ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್ ನಲ್ಲಿ ಮಾತ್ರವಲ್ಲ, 4 ಮೊಬೈಲ್ ಗಳಲ್ಲಿ ವಾಟ್ಸ್ ಆ್ಯಪ್‌ನ ಒಂದೇ ಅಕೌಂಟ್ ಬಳಕೆ ಮಾಡಬಹುದು.
ಈಗಾಗಲೇ ವಾಟ್ಸ್ ಆ್ಯಪ್ ವೆಬ್ ಮೂಲಕ ಕಂಪ್ಯೂಟರ್ ನಲ್ಲಿ ಒಂದೇ ಅಕೌಂಟ್ ನ 2 ಬಳಕೆ ಸಾಧ್ಯವಾಗುತ್ತಿತ್ತು. ಇದರ ನಡುವೆ ಮೊಬೈಲ್ ನಲ್ಲಿಯೂ ಇಂಥದ್ದೇ ಬಳಕೆಗೆ ಅವಕಾಶ ಕೋರಲಾಗಿತ್ತು.
ಆ್ಯಪ್‌ನ ಲಿಂಕ್ ಡಿವೈಸ್ ಆಪ್ಶನ್ ಮೂಲಕ ಈ ಸೌಲಭ್ಯ ಸಿಗಲಿದೆ. ಬಳಕೆದಾರರ ವಾಟ್ಸ್‌ಆ್ಯಪ್ ಅಕೌಂಟ್ ಇರುವ ಮೊಬೈಲ್ ಇನ್ನೇನು ಸ್ವಿಚ್‌ಆಫ್ ಆಗುವಂಥ ಸಂದರ್ಭದಲ್ಲಿ ಇದು ಹೆಚ್ಚು ಸಹಾಯವಾಗಲಿದ್ದು, ಬೇರೊಂದು ಮೊಬೈಲ್‌ನಲ್ಲಿ ಡಿವೈಸ್ ಲಿಂಕ್ ಮಾಡಿ, ಒಟಿಪಿ ಖಚಿತ ಪಡಿಸಿದರೆ ಸಾಕು.