ನಿಯಮಗಳ ಪಾಲನೆ ವಿಚಾರವಾಗಿ ಗೂಗಲ್ ಕಾರ್ಯವೈಖರಿಯ ತನಿಖೆಗೆ ಮುಂದಾದ ಐರೋಪ್ಯ ಒಕ್ಕೂಟ..!
ಗೂಗಲ್ ಸಂಸ್ಥೆಯು ತನ್ನ ವೇದಿಕೆಗಳಿಗೆ ಜಾಹೀರಾತು ನೀಡುವ ಸಂಸ್ಥೆಗಳಿಗೆ ಹೆಚ್ಚು ಲಾಭವಾಗುವ ರೀತಿ ಕಾರ್ಯ ನಿರ್ವಹಿಸುತ್ತಿದೆ. ಆ ಮೂಲಕ ತನ್ನ ಪ್ರತಿಸ್ಪರ್ಧಿ ಪ್ರಕಾಶಕರಿಗೆ, ಜಾಹೀರಾತುದಾರರಿಗೆ ಹಾಗೂ ಜಾಹೀರಾತಿಗೆ ಸಂಬಂಧಿಸಿ ಡಿಜಿಟಲ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಅನನುಕೂಲವಾಗುವಂತೆ ಮಾಡಿದೆ ಎಂಬ ಆರೋಪಗಳು ಕೇಳಿಬಂದಿದೆ..
ಇದ್ರ ಬೆನ್ನಲ್ಲೇ ಡಿಜಿಟಲ್ ಜಾಹೀರಾತು ಕ್ಷೇತ್ರದ ತಂತ್ರಜ್ಞಾನಕ್ಕೆ ಸಂಬಂಧಿಸಿ ಗೂಗಲ್ ಕಂಪನಿಯು ಒಕ್ಕೂಟದ ನಿಯಮಗಳನ್ನು ಪಾಲಿಸುತ್ತದೆಯೇ ಎಂಬುದರ ಕುರಿತು ತನಿಖೆ ನಡೆಸಲು ಐರೋಪ್ಯ ಒಕ್ಕೂಟ ಮುಂದಾಗಿದೆ.
ಹೌದು.. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಯುರೋಪಿಯನ್ ಕಮಿಷನ್ ಹೇಳಿದೆ.ವಿವಿಧ ವೆಬ್ಸೈಟ್ಗಳು ಹಾಗೂ ಆ್ಯಪ್ಗಳಿಗೆ ನಿರ್ದಿಷ್ಟ ಬಳಕೆದಾರರು ಸಂಪರ್ಕ ಹೊಂದುವುದನ್ನು ಗೂಗಲ್ ತಡೆಯುತ್ತಿದೆ ಎಂಬುದಾಗಿ ಕಮಿಷನ್ ಆರೋಪ ಮಾಡಿದ್ದು, ತನಿಖೆ ನಡೆಸಲು ಮುಂದಾಗಿದೆ.. ಇನ್ನೂ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಗೂಗಲ್ ಪ್ರತಿಕ್ರಿಯಿಸಿದೆ.
ಭಾರತದಲ್ಲಿ ನಿಷೇಧವಾಗುತ್ತಾ ವಾಟ್ಸಾಪ್..!
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.