Anna Mani | ಅನ್ನಾ ಮಣಿ ಅವರನ್ನು ಸ್ಮರಿಸಿದ ಗೂಗಲ್
ಅನ್ನಾ ಮಣಿ ಅವರ 104ನೇ ಜನ್ಮದಿನ
ಭಾರತದ ಮೊದಲ ಮಹಿಳಾ ವಿಜ್ಞಾನಿ ಅನ್ನಾಮಣಿ
1918ರಲ್ಲಿ ಜನಸಿದ ಅನ್ನಾ ಮೊಡಾಯಿಲ್ ಮಣಿ
ಅನ್ನಾ ಮಣಿ ಕೊಡುಗೆಗಳಿಗಾಗಿ ಗೂಗಲ್ ಧನ್ಯವಾದ
ಭಾರತದ ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರಾದ ಅನ್ನಮಣಿ ಅವರ 104ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಡೂಡಲ್ ಮೂಲಕ ಗೂಗಲ್ ಅನ್ನ ಮಣಿ ಅವರನ್ನು ಗೌರವಿಸಿದೆ. 1918ರಲ್ಲಿ ಜನಸಿದ ಅನ್ನಾ ಮಣಿ ಅವರು ಕೇರಳದ ಬೌತಶಾಸ್ತ್ರಜ್ಞ ಮತ್ತು ಹವಾಮಾನಶಾಸ್ತ್ರಜ್ಞರಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮಣಿ ಅವರು ಭಾರತೀಯ ಹವಾಮಾನ ಇಲಾಖೆಯ ಮಾಜಿ ಉಪ ಮಹಾನಿರ್ದೇಶಕರಾಗಿಗೂ ಸೇವೆ ಸಲ್ಲಿಸಿದ್ದಾರೆ.
![Google Doodle wishes India's first woman scientist Anna Mani on her 104th birthday saaksha tv](http://saakshatv.com/wp-content/uploads/2022/08/google.jpg)
ಅದೆಷ್ಟೋ ರಾಕೆಟ್ ಉಡಾವಣಾ ಸೌಲಭ್ಯದಲ್ಲಿ ಅನ್ನಾ ಅವರು ಹವಾಮಾನ ವೀಕ್ಷಣಾಲಯ ಮತ್ತು ಸಲಕರಣೆ ಗೋಪುರವನ್ನು ಸಂಶೋಧನೆ ಮಾಡಿದ್ದಾರೆ. ಅವರು ಅಂತರಾಷ್ಟ್ರೀಯ ಓಜೋನ್ ಅಸೋಸಿಯೇಷನ್ ನ ಸದಸ್ಯರು ಆಗಿದ್ದರು. ವಿಶ್ವ ಹವಾಮಾನ ಸಂಸ್ಥೆಯು ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಅವರ ಜೀವನವನ್ನು ವೈಯಕ್ತಿಕ ಸಂದರ್ಶನದಲ್ಲಿ ಪ್ರಕಟಿಸುವ ಮೂಲಕ ನೆನಪಿಸಿಕೊಂಡಿದೆ.
ಅಣ್ಣಾ ಮಣಿಯವರ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸಿಕೊಂಡಿದ್ದಕ್ಕಾಗಿ ಮತ್ತು ಭಾರತೀಯ ಹವಾಮಾನಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಗೂಗಲ್ – ಡೂಡಲ್ ಧನ್ಯವಾದವನ್ನು ತಿಳಿಸಿದೆ.