ವರ್ಕ್ ಫ್ರಮ್ ಹೋಮ್ ನಿಂದಾಗಿ ಗೂಗಲ್ ಎಷ್ಟು ಕೋಟಿ ರೂಪಾಯಿ ಉಳಿಸಿದೆ ಗೊತ್ತಾ..?
ಕಳೆದ ವರ್ಷದಿಂದ ಕೊರೊನಾ ಹಾವಳಿಯಿಂದ ಲಾಕ್ ಡೌನ್ ನಂತರ ಬಹುತೇಕ ಕ್ಷೇತ್ರಗಳ ಉದ್ಯಮಿಗಳಿಗೆ ವರ್ಕ್ ಫ್ರಮ್ ಹೋಮ್ ಆದೇಶ ನೀಡಲಾಗಿದೆ. ಈವರೆಗೂ ಇನ್ನೂ ಐಟಿ ಬಿಟಿ ಕ್ಷೇತ್ರದ ಮಂದಿ ಮನೆಯಲ್ಲಿಯೇ ಕೆಲಸ ಮಾಡ್ತಿದ್ದಾರೆ. ಇದರ ಬೆನ್ನಲ್ಲೇ ಕೊರೊನಾ 2ನೇ ಇನ್ನೂ ಭೀಕರವಾಗಿ ಅಪ್ಪಳಿಸಿದ್ದು, ಇನ್ನೂ ಒಂದು ವರ್ಷಗಳ ಕಾಲ ವರ್ಕ್ ಫ್ರಮ್ ಹೋಮ್ ಮುಂದುವರೆಯಬಹುದು.
ಈ ನಡುವೆ ಉದ್ಯೋಗಿಗಳು, ಮಾನಸಿಕ ಒತ್ತಡ , ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಅನೇಕ ತಜ್ಞರು ತಿಳಿಸಿದ್ದಾರೆ. ಆದ್ರೆ ಈ ವರ್ಕ್ ಫ್ರಮ್ ಹೊಮ್ ಪ್ರಕ್ರಿಯೆಯಿಂದಾಗಿ ಇಡೀ ವಿಶ್ವಾದ್ಯಂತದ ಬಹುತೇಕ ಕಂಪನಿಗಳಿಗೆ ಏನೂ ನಷ್ಟವಾಗಿಲ್ಲ. ಬದಲಾಗಿ ದುಪ್ಪಟ್ಟು ಲಾಭ ಆಗಿದೆ ಹಾಗೇ ಕೋಟಿ ಕೋಟಿ ರೂಪಾಯಿ ಹಣ ಉಳಿತಾಯ ಮಾಡಿವೆ. ಇಂತಹ ಸಂಸ್ಥೆಗಳಲ್ಲಿ ಇಂಟರ್ ನೆಟ್ ದೈತ್ಯ ಗೂಗಲ್ ಕೂಡ ಒಂದು..
ಹೌದು ಸರ್ಚ್ ಎಂಜಿನ್ ದೈತ್ಯ ಗೂಗಲ್ ಗೆ ಬರೋಬ್ಬರಿ 1 ಬಿಲಿಯನ್ ಡಾಲರ್ ಉಳಿತಾಯವಾಗಿದೆ ಎನ್ನಲಾಗಿದೆ. ಕೊರೊನಾ ಹಿನ್ನೆಲೆ ನಿರ್ಬಂಧಗಳು ಹೆಚ್ಚಿರುವ ಕಾರಣ ಜನರು ಆನ್ ಲೈನ್ನಲ್ಲೇ ಪ್ರವಾಸಗಳು ಮತ್ತು ಹೋಟೆಲ್ ಗಳನ್ನು ಕಾಯ್ದಿರಿಸುತ್ತಿದ್ದಾರೆ. ಇದು ಗೂಗಲ್ ಗೆ ಉತ್ತಮ ಜಾಹೀರಾತು ಆದಾಯ ತಂದುಕೊಡುತ್ತಿದೆ. ಜೊತೆಗೆ ಗೂಗಲ್ ನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಪ್ರಯಾಣಕ್ಕೂ ಕಂಪನಿಯಿಂದ ಹಣ ಖರ್ಚಾಗುತ್ತಿಲ್ಲ, ಹೀಗಾಗಿ ಉಳಿತಾಯ ಹೆಚ್ಚಾಗಿದೆ.
ಜೊತೆಗೆ ಪ್ರಯಾಣ ಮತ್ತು ಮನರಂಜನಾ ವೆಚ್ಚವು $371 ಮಿಲಿಯನ್ನಷ್ಟು ಇಳಿದಿದೆ. ಉಳಿತಾಯದ ಜೊತೆಗೆ ಕಂಪನಿಯ ಆದಾಯವು ಶೇಕಡಾ 34ರಷ್ಟು ಹೆಚ್ಚಿದೆ. ಕಂಪನಿಯ ಫೈಲಿಂಗ್ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ಗೂಗಲ್ನ ಮಾತೃಸಂಸ್ಥೆ ಆಲ್ಫಾಬೆಟ್ ಇಂಕ್ ಕಂಪನಿಯು ಹಿಂದಿನ ಒಂದು ವರ್ಷದ ಅವಧಿಗೆ ಹೋಲಿಸಿದರೆ ಪ್ರಚಾರ, ಪ್ರಯಾಣ ಮತ್ತು ಮನರಂಜನೆಯಿಂದ $268 ಮಿಲಿಯನ್ ವೆಚ್ಚವನ್ನು ಉಳಿಸಿದೆ. ವಾರ್ಷಿಕ ಆಧಾರದ ಮೇಲೆ $1 ಬಿಲಿಯನ್ ಗೂ ಹೆಚ್ಚು ಅಂದ್ರೆ ಸುಮಾರು 7,418 ಕೋಟಿ ರೂ. ಉಳಿತಾಯ ಮಾಡಿದೆ.
ಕೋವಿಡ್ ವ್ಯಾಕ್ಸಿನೇಷನ್ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸೆಲೆಬ್ರಿಟಿಗಳು
ಸೋಂಕಿತರು ಆಸ್ಪತ್ರೆ ಮುಂದೆ ಸಾಲು ಗಟ್ಟಿ ನಿಂತಿದ್ರೆ ನಾವು ನೆಮ್ಮದಿಯ ನಿದ್ದೆ ಮಾಡಲಿಕ್ಕೆ ಆಗಲ್ಲಾ – ಸೋನು ಸೂದ್..!
ಕೊರೊನಾ ಸಂಕಷ್ಟ – ತುರ್ತು ಕೋವಿಡ್ ಸೌಲಭ್ಯ ಕೇಂದ್ರ ಸ್ಥಾಪಿಸಿದ ಅಜಯ್ ದೇವಗನ್..!
ನಿರ್ಮಾಪಕ ರಾಮು ನಿಧನ : ಮಾಲಾಶ್ರೀಗೆ ಭಾವುಕ ಪತ್ರ ಬರೆದ ಶ್ರುತಿ..!








