ಗೂಗಲ್ ಸರ್ಚ್ ನಿಂದ ಕನ್ನಡ ಭಾಷೆಗೆ ಅವಮಾನ
ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು (which is the ugliest Language in India) ಎಂದು ಗೂಗಲ್ ಸರ್ಚ್ ನಲ್ಲಿ ಹುಡುಕಿದರೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಉತ್ತರವನ್ನು ವೆಬ್ಸೈಟ್ ಒಂದು ನೀಡಿದೆ.
ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು debtconsolidationsquad.com ಎಂಬ ಜಾಲತಾಣ ಉತ್ತರವನ್ನು ನೀಡಿದೆ.
ಈ ಮೂಲಕ ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಸುಂದರ ಭಾಷೆ ಕನ್ನಡ ಭಾಷೆಗೆ ಮತ್ತು ಕನ್ನಡಿಗರಿಗೆ ಅವಮಾನ ಮಾಡಲಾಗಿದೆ. ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಗೂಗಲ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಮತ್ತು ಕೂಡಲೇ ಈ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನರು ಗೂಗಲ್ ಸರ್ಚ್ನಲ್ಲಿ ಕಾಣಿಸುತ್ತಿರುವ ಈ ಪುಟವನ್ನು ರಿಪೋರ್ಟ್ ಮಾಡಿರುವ ಹಿನ್ನೆಲೆಯಲ್ಲಿ ಗೂಗಲ್ ಆ ಲೇಖನವನ್ನು ಹಿಂಪಡೆದಿದೆ. ಆ ರೀತಿಯ ಉತ್ತರ ಬರಲು debtconsolidationsquad.com ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನ ಕಾರಣವಾಗಿದ್ದು, ಅದನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಲೇಖನದಲ್ಲಿ ಏನಿತ್ತು, ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು ಎಂಬ ಮಾಹಿತಿ ದೊರೆತಿಲ್ಲ.
ಸುಂದರವಾದ ಕನ್ನಡ ಭಾಷೆಗೆ ಅಗ್ಲಿಯೆಸ್ಟ್ ಭಾಷೆ ಎಂದು ಸರ್ಟಿಫಿಕೇಟ್ ನೀಡಿರುವ ಗೂಗಲ್ ವಿರುದ್ಧ ಕನ್ನಡಿಗರು ವಿವಿಧ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಬ್ಬಿನ ರಸದ ಇನ್ನಷ್ಟು ಆರೋಗ್ಯ ಪ್ರಯೋಜನಗಳು#Saakshatv #healthtips #sugarcane https://t.co/2XjBuk8raQ
— Saaksha TV (@SaakshaTv) June 1, 2021
ಎಸ್ಬಿಐ ನಿಂದ 5 ಲಕ್ಷ ರೂಪಾಯಿಗಳ ಕೋವಿಡ್ ಪರ್ಸನಲ್ ಲೋನ್! ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?#SBI #coronatreatment https://t.co/kxXOOAG3vK
— Saaksha TV (@SaakshaTv) June 2, 2021
ರುಚಿಯಾದ ಕ್ಯಾಪ್ಸಿಕಂ ಬಾತ್#saakshatv #cooking #recipe https://t.co/MhP2wa419O
— Saaksha TV (@SaakshaTv) June 2, 2021
ನಿಮಗೆ ದಿನವಿಡೀ ಆಲಸ್ಯ , ದಣಿವು ಕಾಣಿಸಿಕೊಳ್ಳುತ್ತಿದೆಯೇ? ಹಾಗಿದ್ದರೆ ವಿಟಮಿನ್ ಡಿ ಕೊರತೆ ಕಾರಣವಾಗಿರಬಹುದು#Saakshatv #healthtips #vitaminD https://t.co/GlsUpQobAH
— Saaksha TV (@SaakshaTv) June 2, 2021
ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡಲಿದೆ 5 ಲಕ್ಷ ರೂಗಳವರೆಗೆ ಸಾಲ !#Banks #loans #covidtreatment https://t.co/tJYFqSyYYO
— Saaksha TV (@SaakshaTv) June 1, 2021
#Google #search #Kannada