20 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್..! ಯಾಕೆ ಗೊತ್ತಾ..?
ನವದೆಹಲಿ : ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಸುಧಾರಣೆಗಳನ್ನು ಯಶಸ್ವಿಯಾಗಿ ಪೂರೈಸಿದ ರಾಜ್ಯಗಳ ಸಂಖ್ಯೆ 20ಕ್ಕೆ ತಲುಪಿದೆ. ಈ 20 ರಾಜ್ಯಗಳು ವ್ಯಾಪಾರ ಸುಧಾರಣೆಗಳನ್ನು ಸುಲಭಗೊಳಿಸಿವೆ ಎಂದು ಹಣಕಾಸು ಸಚಿವಾಲಯವು ತಿಳಿದಿದೆ. ಹೀಗಾಗಿ ಸುಧಾರಣೆಗಳನ್ನು ಪೂರ್ಣಗೊಳಿಸಿದ ರಾಜ್ಯಗಳು ಒಟ್ಟು ದೇಶೀಯ ಉತ್ಪನ್ನದ (GSDP) ಶೇ0.25ರಷ್ಟು ಹೆಚ್ಚುವರಿ ಸಾಲ ಪಡೆಯಲು ಅರ್ಹವಾಗಿವೆ.
ಇನ್ನೂ ಛತ್ತೀಸ್ಗಢ, ಅರುಣಾಚಲ ಪ್ರದೇಶ, ಗೋವಾ, ತ್ರಿಪುರ, ಮೇಘಾಲಯ ರಾಜ್ಯಗಳು ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಸುಧಾರಣೆಗಳನ್ನು ಪೂರ್ಣಗೊಳಿಸಿವೆ ಎಂದು ಸಚಿವಾಲಯವು ತಿಳಿಸಿದ್ದು, ಮುಕ್ತ ಮಾರುಕಟ್ಟೆ ಸಾಲಗಳ ಮೂಲಕ 39,521 ಕೋಟಿ ರೂ. ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಸಂಗ್ರಹಿಸಲು ಖರ್ಚು ಇಲಾಖೆ ಒಟ್ಟು 20 ರಾಜ್ಯಗಳಿಗೆ ಅನುಮತಿ ನೀಡಿದೆ.