ಬೆಳಗಾವಿ: ನವರಾತ್ರಿ (Navaratri) ಹಬ್ಬದ ವೇಳೆ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ.
ಗೃಹ ಲಕ್ಷ್ಮಿ (Gruha Lakshmi) ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಈ ತಿಂಗಳಲ್ಲಿ ಎರಡು ಕಂತಿನ ಹಣ ಜಮಾ ಆಗಲಿದೆ ಎನ್ನಲಾಗಿದೆ.
ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಮಾತನಾಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು, ಅ. 7 ಹಾಗೂ 9ರಂದು ಎರಡೂ ಕಂತಿನ ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.
ತಾಂತ್ರಿಕ ಕಾರಣದಿಂದ ಎರಡು ತಿಂಗಳ ಕಂತಿನ ಹಣ ಹಾಕುವುದು ವಿಳಂಬವಾಗಿತ್ತು. ಆದರೆ, ಈಗ ಜುಲೈ ಮತ್ತು ಆಗಸ್ಟ್ ಕಂತಿನ ಹಣ ಜಮೆ ಆಗಲಿದೆ. ಎಲ್ಲರೂ ಹೋಳಿಗೆ ಮಾಡಿಕೊಂಡು ಊಟ ಮಾಡಿ. ನನಗೆ ಸಂತೋಷವಾಗುತ್ತದೆ ಎಂದಿದ್ದಾರೆ.