ಹೊಸದಿಲ್ಲಿ, ಮೇ 17: ಕಾಲ್ನಡಿಗೆಯಲ್ಲಿ ಊರಿನತ್ತ ಹೊರಟಿರುವ ವಲಸೆ ಕಾರ್ಮಿಕರನ್ನು ತಡೆಯುವಂತೆ ಮತ್ತು ಅವರಿಗೆ ನೆರವಾಗುವಂತೆ ಆಗ್ರಹಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಔರಂಗಾಬಾದ್ ರೈಲ್ವೆ ಹಳಿ ಮೇಲೆ 16 ಕಾರ್ಮಿಕರು ಅಪಘಾತಕ್ಕೀಡಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ವಕೀಲ ಅಲಖ್ ಅಲೋಕ್ ಶ್ರೀ ವಾಸ್ತವ್, ಕಾಲ್ನಡಿಗೆಯಲ್ಲಿ ಹೊರಟಿರುವ ವಲಸೆ ಕಾರ್ಮಿಕರನ್ನು ತಡೆಯುವಂತೆ ಹಾಗೂ ಅವರಿಗೆ ನೆರವಾಗುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಲಸಿಗರಲ್ಲಿ ಯಾರು ನಡೆದು ಹೋಗುತ್ತಾರೆ ಮತ್ತು ಯಾರು ನಡೆಯುವುದಿಲ್ಲ ಎಂದು ನೋಡುವುದು ಸುಪ್ರೀಂ ಕೋರ್ಟ್ ನ ಕೆಲಸವಲ್ಲ. ವಲಸಿಗರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್ ರೈಲು ಸಂಚಾರ ಆರಂಭಿಸಿದ್ದು, ರಾಜ್ಯ ಸರ್ಕಾರಗಳು ಅಂತರ್ ರಾಜ್ಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಹೀಗಿದ್ದೂ ಅವರು ಕಾಲ್ನನಡಿಗೆಯಲ್ಲಿ ಊರಿಗೆ ತೆರಳಿದರೆ ಯಾರೇನೂ ಮಾಡಲಾಗದು. ರೈಲ್ವೆ ಹಳಿಯಲ್ಲಿ ಜನ ಮಲಗಿದರೆ, ರೈಲನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಅವರು ಹಳಿಯ ಮೇಲೆ ಮಲಗಬಾರದಿತ್ತು. ಇಂತಹ ಘಟನೆಗಳು ಮುಂದೆ ಘಟಿಸದಂತೆ ಆಯಾ ರಾಜ್ಯಗಳು ಗಮನ ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಆಯಾ ಪ್ರದೇಶಗಳ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳನ್ನು ವಲಸೆ ಕಾರ್ಮಿಕರ ಆಹಾರ ವಸತಿಗಳಿಗೆ ಸಂಬಂಧಿಸಿದಂತೆ ಗಮನಹರಿಸಲು ಕೇಳಿಕೊಳ್ಳುವುದು ಉತ್ತಮ ಎಂದು ನ್ಯಾ| ಎಲ್. ನಾಗೇಶ್ವರ ರಾವ್ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ.
ಅಂದು ಅವಹೇಳನ ಇಂದು ಆಶ್ರಯ: ನಂದನ್ ನಿಲೇಕಣಿ ವಿಚಾರದಲ್ಲಿ ಪ್ರಧಾನಿ ಮೋದಿಯವರ ಅವಕಾಶವಾದಿ ರಾಜಕೀಯವನ್ನು ಪ್ರಶ್ನಿಸಿದ ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕತ್ವದ ದ್ವಂದ್ವ ನಿಲುವನ್ನು ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ತೀವ್ರವಾಗಿ ತರಾಟೆಗೆ...








