ಕೊಪ್ಪಳ: ಮಹಾತ್ಮ ಗಾಂಧಿ, ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿಗಳ ಮಾಹಿತಿಯನ್ನು ನೀಡುವಂತೆ ಐದು ತಿಂಗಳ ಹಿಂದೆ ಆರ್ಟಿಐ ಅಡಿ ಅರ್ಜಿ ಸಲ್ಲಿಸಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವ ಆರೋಪ ಕೇಳಿ ಬಂದಿದೆ.
ಸರ್ಕಾರದ ಮಾಹಿತಿ ಹಕ್ಕು ನಿಯಮದ ಅಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಸಿರಗುಂಪಿ ಗ್ರಾಮ ಪಂಚಾಯಿತಿಯಲ್ಲಿ ಪರಶುರಾಮ ಡೊಕ್ಕಿ ಎನ್ನುವವರು ಮಹಾತ್ಮ ಗಾಂಧಿ, ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿಗಳು ವಿವರ ಸೇರಿದಂತೆ ವಿವಿಧ ಕಾಮಗಾರಿಗಳ ಮಾಹಿತಿಯನ್ನು 2020ರ ಅಕ್ಟೋಬರ್25ರಂದು ಮಾಹಿತಿ ಕೇಳಿದ್ದರು.
ಸರ್ಕಾರದ ನಿಯಮ ಅನುಸಾರ ಮಾಹಿತಿ ಕೇಳಿದ ಮಾಹಿತಿದಾರರಿಗೆ 45 ದಿನಗಳ ಒಳಗೆ ಮಾಹಿತಿ ಕೊಡಬೇಕು. ಕೊಡದೆ ಹೋದರೆ ಮಾಹಿತಿದಾರರು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಅದೇ ರೀತಿ ಮಾಹಿತಿದಾರರು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೊಡಿಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಮೇಲಧಿಕಾರಿಗಳ ಆದೇಶಕ್ಕೂ ಕಿಮ್ಮತ್ತು ಕೊಡದೆ ಮಾಹಿತಿ ಕೊಡದ ಅಧಿಕಾರಿಗಳ ವಿರುದ್ಧ ರಾಜ್ಯಪಾಲ ವಜುಬಾಯ್ ವಾಲಾ ಅವರಿಗೆ ಪರಶುರಾಮ ಡೊಕ್ಕಿ ದೂರು ಸಲ್ಲಿಸಿದ್ದಾರೆ. ಮಾಹಿತಿ ಕೊಡದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮಾಹಿತಿ ದಾರ ಪರುಶುರಾಮ ಡೊಕ್ಕಿ ಆಗ್ರಹಿಸಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಏನು….?
ಶಿರಗುಪ್ಪಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಮತ್ತು ಕಾಮಗಾರಿ ನಡೆಸದೇ ಬಿಲ್ ಎತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತಂತೆ ಈ ಹಿನ್ನೆಲೆಯಲ್ಲಿ ಮಾಹಿತಿದಾರರು ಆಗಿರುವ ಪರುಶುರಾಮ್ ಡೊಕ್ಕಿ ಅವರು ಮಾಹಿತಿ ಕೊಡುವಂತೆ ಮಾಹಿತಿ ಹಕ್ಕು ನಿಯಮದ ಅಡಿ ಮಾಹಿತಿ ಕೇಳಿದ್ರು. ಸುಮಾರು ತಿಂಗಳುಗಳ ಕಾಲ ಕಳೆದರು ಕೂಡ ಮಾಹಿತಿ ಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಮಾಹಿತಿ ಕೊಡದ ಅಧಿಕಾರಿಗಳ ವಿರುದ್ಧ ತಾಲ್ಲೂಕ ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಡಿಸುವಂತೆ ಮಾಹಿತಿದಾರ ಪರುಶುರಾಮ ಅವರು ಮನವಿ ಮಾಡಿದ್ರು. ಪರುಶುರಾಮ ಅವರ ಮನವಿಯನ್ನು ಆಧರಿಸಿ ಹಿರಿಯ ಅಧಿಕಾರಿಗಳು ಕೂಡ ಶಿರಗುಪ್ಪಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಮಾಹಿತಿ ಕೊಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಅಧಿಕಾರಿಗಳು ಕೂಡ ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ.
ಮಾಹಿತಿ ಕೊಡಲು ಅಧಿಕಾರಿಗಳ ಹಿಂದೇಟು ಯಾಕೆ..?
ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಶಿರಗುಪ್ಪಿ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತಂತೆ. ಈ ಹಿನ್ನೆಲೆಯಲ್ಲಿ ಎಲ್ಲಿ ಮಾಹಿತಿ ಕೊಟ್ಟರೆ ನಾವು ಮಾಡಿದ ತಪ್ಪು ಹೊರಗೆ ಬರುತ್ತೋ ಎಂಬ ಭಯದಿಂದ ಅಧಿಕಾರಿಗಳು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಅಂತಾರೆ ಪರುಶುರಾಮ್ ಡೊಕ್ಕಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel