Govinda Karajola | ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ
ಬೆಳಗಾವಿ : ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ, ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ.
ಎನ್ ಸಿ ಪಿ, ಕಾಂಗ್ರೆಸ್, ಶಿವಸೇನೆ ಸೇನೆ ಸೇರಿ ಸರ್ಕಾರ ಮಾಡಿದೆ. ಬಾಳಾಸಾಹೇಬ್ ಠಾಕ್ರೆ ಮುಂಬೈನಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ ನಡೆದಿತ್ತು.
ದಬ್ಬಾಳಿಕೆ ತಡೆಯುವ ನಿಟ್ಟಿನಲ್ಲಿ ಠಾಕ್ರೆ ಶಿವಸೇನೆ ರಚನೆ ಮಾಡಿದ್ದರು. ಶಿವಸೇನೆ, ಕಾಂಗ್ರೆಸ್ ಎಂದಿಗೂ ಸೇರಲು ಆಗಲ್ಲ.
ಎರಡು ಪಕ್ಷಗಳು ಎಣ್ಣೆ, ನೀರು ಎಂದಿಗೂ ಸೇರಲು ಆಗಲ್ಲ. ಅಧಿಕಾರದ ಆಸೆಗೆ ಉದ್ಧವ ಠಾಕ್ರೆ ಕಾಂಗ್ರೆಸ್ ಜತಗೆ ಕೈಜೋಡಿದ್ದಾರೆ.
ಉದ್ಧವ ಠಾಕ್ರೆ ವಿರುದ್ಧ ಅವರದೇ ಪಕ್ಷದ ಶಾಸಕರು ತಿರುಗಿಬಿದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ತತ್ವ ಸಿದ್ದಾಂತ ಇಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರುತ್ತೆ ಕಾದು ನೋಡಿ ಎಂದು ಹೇಳಿದರು.

ಇದೇ ವೇಳೆ ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ವಿಕೃತಿ ಮನಸ್ಸಿನವರು ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಆದ್ರೆ ಮರಾಠಿಯಲ್ಲಿ ದಾಖಲೆ ನೀಡಲು ಆಗ್ರಹಿಸಿ ಎಂಇಎಸ್ ಪ್ರತಿಭಟನೆ ನಡೆಸುತ್ತಿವೆ.
ಇದು ಅರ್ಥ ಇಲ್ಲದ ಬೇಡಿಕೆ, ಅವರೇನು ಪಾಕಿಸ್ತಾನದವರು ಅಲ್ಲ. ಅವರು ನಮ್ಮವರೇ ಇದ್ದಾರೆ.
ದುರಾಭಿಮಾನ ಬಿಟ್ಟು ನಮ್ಮ ಜತೆಗೆ ಬನ್ನಿ ಎಂದು ಮನವೊಲಿಸುವ ಪ್ರಯತ್ನ ಮಾಡುತ್ತೇವೆ.
ಕನ್ನಡದಲ್ಲಿ ಆಡಳಿತರೋದ್ರಿಂದ ಸಹಕರಿಸಿ ಎಂದು ಮನವಿ ಮಾಡುತ್ತೀವಿ ಎಂದು ಕಾರಜೋಳ ಹೇಳಿದ್ದಾರೆ.








