ADVERTISEMENT
Saturday, May 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಚಾಣಕ್ಷ ಜನ ನಾಯಕ.. ಸಂಘಟನೆಯ ಚತುರ.. ಚುನಾವಣೆ ಗೆಲ್ಲುವ ಮಾಸ್ಟರ್ ಮೈಂಡ್ ವಿ. ಸೋಮಣ್ಣ..!

admin by admin
May 2, 2021
in Newsbeat, State, ರಾಜ್ಯ
v.s. somanna govindarajanagara saakshatv minister v.somanna
Share on FacebookShare on TwitterShare on WhatsappShare on Telegram

ಚಾಣಕ್ಷ ಜನ ನಾಯಕ.. ಸಂಘಟನೆಯ ಚತುರ.. ಚುನಾವಣೆ ಗೆಲ್ಲುವ ಮಾಸ್ಟರ್ ಮೈಂಡ್ ವಿ. ಸೋಮಣ್ಣ..!

v.s. somanna govindarajanagara saakshatv minister v.somannaರಾಜ್ಯ ರಾಜಕೀಯದ ಇತಿಹಾಸದಲ್ಲಿ ಈವರೆಗೂ ಸಾಕಷ್ಟು ಚುನಾವಣೆಗಳು – ಉಪ ಚುನಾವನೆಗಳು ನಡೆದಿವೆ. ಘಟಾನುಘಟಿ ನಾಯಕರು ಈ Àಚುನಾವಣೆಗಳ ಜವಾಬ್ದಾರಿಗಳನ್ನು ಹೊತ್ತು ಸೋಲು ಮತ್ತು ಗೆಲುವು ಎರಡನ್ನೂ ಅನುಭವಿಸಿದ್ದಾರೆ. ಆದ್ರೆ ರಾಜ್ಯದ ಆ ಒಬ್ಬ ಜನ ನಾಯಕ ಮಾತ್ರ ಸೋಲಿಗಿಂತಲೂ ಹೆಚ್ಚು ಗೆಲುವುಗಳನ್ನೇ ಕಂಡಿದ್ದಾರೆ. ಆ ನಾಯಕ ಬೇರ್ಯಾರು ಅಲ್ಲ ಸದ್ಯ ರಾಜ್ಯದ ವಸತಿ ಸಚಿವ ವಿ.ಸೋಮಣ್ಣ.

Related posts

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

April 30, 2026
ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

April 30, 2026

ಹೌದು..! ವಿ.ಸೋಮಣ್ಣ ರಾಜ್ಯ ಕಂಡ ಸರಳ ರಾಜಕಾರಣಿಗಳಲ್ಲಿ ಒಬ್ಬರು. ಅನವಶ್ಯಕ ಅಬ್ಬರವಿಲ್ಲದೇ ಕಾಯಕವೇ ಕೈಲಾಸವೆಂಬಂತೆ ತಮಗೆ ಕೊಟ್ಟ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿಮುಗಿಸುವ ಜನನಾಯಕರು. ಅದರಲ್ಲೂ ಚುನಾವಣೆ – ಉಪಚುನಾವಣಗಳ ವಿಷಯಕ್ಕೆ ಬಂದರೇ ವಿ.ಸೋಮಣ್ಣ ಅವರ ತಂತ್ರಗಾರಿಕೆಯೇ ಬೇರೆ. ಅವರು ಎಲೆಕ್ಷನ್ ಜವಾಬ್ದಾರಿ ವಹಿಸಿಕೊಂಡರೂ ಅಂದ್ರೆ ಅಲ್ಲಿ ಪಕ್ಷಕ್ಕೆ ಗೆಲುವು ಕಟ್ಟಿಟ್ಟಬುತ್ತಿ. ಯಾಕೆಂದ್ರೆ ವಿ.ಸೋಮಣ್ಣ ಶಿಸ್ತಿನ ಸಿಪಾಯಿಯಂತೆ ಪಕ್ಷದ ಗೆಲುವಿಗಾಗಿ ಹಗಲು ರಾತ್ರಿ ದುಡಿಯುತ್ತಾರೆ. ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸಲು ಚಾಣಕ್ಯನಂತೆ ಎದುರಾಳಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು.

v.s. somanna govindarajanagara saakshatv minister v.somannaವಿ ಸೋಮಣ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಬಸವಕಲ್ಯಾಣದಲ್ಲಿ ಬಿಜೆಪಿ ಜಯ ಸಾಧಿಸಿದೆ. ಇದು ಮಾತ್ರವಲ್ಲದೇ ಸೋಮಣ್ಣ ಹಿಂದೆ ಹಲವು ಚುನಾವಣೆಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಅಲ್ಲೂ ಕೂಡ ಯಶ ಕಂಡಿದ್ದರು. ರಾಜ್ಯ ಬಿಜೆಪಿಯ ಶಿಸ್ತಿನ ಸಿಪಾಯಿ ವಿ.ಸೋಮಣ್ಣ ಈ ರೀತಿ ಚುನಾವಣಾ ಉಸ್ತುವಾರಿ ವಹಿಸಿಕೊಂಡು ಪಕ್ಷಕ್ಕೆ ಗೆಲುವು ತಂದುಕೊಟ್ಟಿರುವುದು ಮೊದಲೇನಲ್ಲ.

ತುಮಕೂರು ಲೋಕಸಭಾ ಎಲೆಕ್ಷನ್ 2019- ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಜಿ.ಎಸ್. ಬಸವರಾಜ್ ಗೆಲುವು ಸಾಧಿಸಿದ್ದರು. ಆಗ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣ ಅವರು.

– ಚಿಂಚೋಳಿ ಬೈ ಎಲೆಕ್ಷನ್ – 2019 – ಅವಿನಾಶ್ ಜಾಧವ್ ಗೆದ್ದಾಗಲೂ ಉಸ್ತುವಾರಿ ವಹಿಸಿಕೊಂಡಿದ್ದು ಸಚಿವ ವಿ. ಸೋಮಣ್ಣನವರು.

– ದೇವದುರ್ಗ ಬೈ ಎಲೆಕ್ಷನ್ – 2016 – ಶಿವಣ್ಣ ಗೌಡ ನಾಯಕ ಜಯ ಗಳಿಸಿದ್ದರು. ಆಗಲೂ ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.

– ಚನ್ನಪಟ್ಟಣ ಬೈ ಎಲೆಕ್ಷನ್ – 2011- ಸಿ.ಪಿ. ಯೋಗಿಶ್ವರ್ ಗೆಲುವು ಸಾಧಿಸಿದ್ದರು. ಆಗಲೂ ವಿ. ಸೋಮಣ್ಣನವರು ಉಪ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.

– ಕಡೂರು ಬೈ ಎಲೆಕ್ಷನ್ – 2010 – ಡಾ. ವೈ.ಸಿ. ವಿಶ್ವನಾಥ್ ಗೆಲುವು ಸಾಧಿಸಿದ್ದರು. ಉಪ ಚುನಾವಣೆಯ ಪೂರ್ತಿ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.

v.s. somanna govindarajanagara saakshatv minister v.somanna– ಕೊಪ್ಪಳ ಬೈ ಎಲೆಕ್ಷನ್ – 2011 – ಕೆ.ಎಸ್. ಅಮರಪ್ಪ ಅವರಿಗೆ ಜಯ. ಉಸ್ತುವಾರಿ ವಹಿಸಿಕೊಂಡಿದ್ದು ಚಾಣಕ್ಷ ನಾಯಕ ವಿ. ಸೋಮಣ್ಣನವರು.

– ಬೆಂಗಳೂರು ದಕ್ಷಿಣ ಲೋಕಸಭಾ – 2009, 2014, 2018- 2009, 2014ರಲ್ಲಿ ಅನಂತ್ ಕುಮಾರ್ ಮತ್ತು 2018ರಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು. ಈ ಎಲ್ಲಾ ಚುನಾವಣೆಗಳಲ್ಲೂ ವಿ. ಸೋಮಣ್ಣನವರು ಮುಂಚೂಣಿಯಲ್ಲಿದ್ದರು.

-ತುಮಕೂರು ಲೋಕಸಭಾ ಎಲೆಕ್ಷನ್ – 2009ರಲ್ಲೂ ವಿ. ಸೋಮಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು.
– 2015ರ ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ 11 ಸ್ಥಾನಗಳನ್ನು ಗೆಲ್ಲುವಲ್ಲಿ ವಿ. ಸೋಮಣ್ಣನವರ ಪಾತ್ರ ಮಹತ್ವದ್ದಾಗಿತ್ತು.
2010 ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 16 ಸ್ಥಾನಗಳನ್ನು ಗೆದ್ದಿದ್ದು ಕೂಡ ವಿ. ಸೋಮಣ್ಣನನವರ ವರ್ಚಸ್ಸಿನಿಂದಲೇ.
2019 ಬಿಬಿಎಂಪಿ ಕಾವೇರಿಪುರ ಬೈ ಎಲೆಕ್ಷನ್ ನಲ್ಲಿ ಪಲ್ಲವಿ ಚಿನ್ನಪ್ಪ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.
ಒಟ್ಟಿನಲ್ಲಿ ವಿ. ಸೋಮಣ್ಣನವರು ತಮಗೆ ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ರಾಜಕೀಯ ನೈಪುಣ್ಯತೆ ಅವರಲ್ಲಿದೆ. ಹೀಗಾಗಿ ಚುನಾವಣಾ ಉಸ್ತುವಾರಿ ಅಖಾಡದಲ್ಲಿ ಸೋಮಣ್ಣನವರು ಸೋಲಿಲ್ಲದ ಸರದಾರನೇ ಸರಿ. ಪಕ್ಷ ತನ್ನ ಮೇಲೆ ವಿಶ್ವಾಸವಿಟ್ಟಾಗ ಅದನ್ನು ಸಮರ್ಪಕವಾಗಿ ನಿಭಾಯಿಸುವ ಚಾಕಚಕ್ಯತೆ ಕೂಡ ಅವರಲ್ಲಿದೆ. ತಳಮಟ್ಟದ ಕಾರ್ಯಕರ್ತರ ಬೆಂಬಲ, ನಂಬಿಕೆ ಮತ್ತು ಸ್ಥಳೀಯ ನಾಯಕರ ವಿಶ್ವಾಸ ಗಳಿಸಿಕೊಂಡು ಹೋಗುವ ಜನ ನಾಯಕ ವಿ. ಸೋಮಣ್ಣ. ಒಟ್ಟಿನಲ್ಲಿ ವಿ. ಸೋಮಣ್ಣನವರು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿಯೇ ನಿಭಾಯಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

Tags: #cmbsy#saakshatvbasavakalyanabengalurBJPGovindarajanagarakarnatakakarnataka bjpminister v. somannav somannav.somanna abhimani balaga
ShareTweetSendShare
Join us on:

Related Posts

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

by Shwetha
April 30, 2026
0

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಸಹಾಯಕ...

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

by Shwetha
April 30, 2026
0

ಬೆಂಗಳೂರು ಸಹಕಾರಿ ಹಾಲು ಒಕ್ಕೂಟವಾದ ಬೆಂಗಳೂರು ಮಿಲ್ಕ್ ಯುನಿಯನ್ ಲಿಮಿಟೆಡ್ (ಬಮೂಲ್) ಮತ್ತು ತಿರುಮಲ ತಿರುಪತಿ ದೇವಸ್ಥಾನಮ್ ನಡುವೆ ಮಹತ್ವದ ಒಪ್ಪಂದ ಕೈಗೊಳ್ಳಲಾಗಿದೆ. ಈ ಒಪ್ಪಂದದ ಪ್ರಕಾರ,...

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

by Shwetha
April 30, 2026
0

ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದಕ ದೇಶವಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈಗ ಒಪೆಕ್ ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ಈ ಮಹತ್ವದ ನಿರ್ಧಾರ ಮೇ 1ರಿಂದ ಜಾರಿಗೆ...

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60  ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

by Shwetha
April 30, 2026
0

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಬೇಕೆಂದು ಕನಸು ಕಾಣುತ್ತಿರುವ ಯುವಜನತೆಗೆ ಇದೀಗ ಬಂಪರ್ ಅವಕಾಶ ಎದುರಾಗಿದೆ. ದೇಶದ ಕೇಂದ್ರ ಬ್ಯಾಂಕ್ ಆಗಿರುವ...

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

by Shwetha
April 30, 2026
0

ಮಳೆರಾಯನ ಆರ್ಭಟಕ್ಕೆ ನಲುಗಿದ ಸಿಲಿಕಾನ್ ಸಿಟಿ ಶಿವಾಜಿನಗರದಲ್ಲಿ ಸಂಭವಿಸಿತು ಘನಘೋರ ದುರಂತ ಬೆಂಗಳೂರಿನಲ್ಲಿ ಏಪ್ರಿಲ್ 29ರ ಸಂಜೆ ಸುರಿದ ಅಲಿಕಲ್ಲು ಸಹಿತ ಧಾರಾಕಾರ ಮಳೆ ಭಾರಿ ಅವಾಂತರವನ್ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram