Govt of karnataka : ಮನೆ ಕೊಳ್ಳೋರಿಗೆ ಸರ್ಕಾರದಿಂದ ಸೂಪರ್ ಅಫರ್ !
ಮನೆ ಕೊಳ್ಳೋರಿಗೆ ಸರ್ಕಾರ ಸೂಪರ್ ಅಫರ್ ನೀಡಿದೆ. ಸರ್ಕಾರವು ಸಿಎಂ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮನೆಗಳ ಬೆಲೆಗಳನ್ನು ಮತ್ತಷ್ಟು ಕಡಿಮೆ ಮಾಡಿದೆ.
ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಮನೆ ಕೆಲಸದವರು ಸೇರಿದಂತೆ, ದುಡಿಯುವ ಕೆಳವರ್ಗದ ಜನರ ಸ್ವಂತ ಸೂರಿನ ಆಸೆ ಈಡೇರಿಸಲು ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆ ರೂಪಿಸಲಾಗಿದೆ. ಇದೀಗ ರಾಜ್ಯ ಸರ್ಕಾರವು ಸಿಎಂ ವಸತಿ ಯೋಜನೆಯಡಿ ಮನೆ ಖರೀದಿ ಮೊತ್ತವನ್ನು ಮತ್ತಷ್ಟು ಇಳಿಕೆ ಮಾಡುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಪ್ರತಿ ಮನೆಗೆ ಸಾಮಾನ್ಯ ವರ್ಗದವರಿಗೆ 7.90 ಲಕ್ಷ ರೂ ಇರುವ ಮನೆಯ ಬೆಲೆ 6.5 ಲಕ್ಷ ರೂ.ಗಳಿಗೆ ಇಳಿಕೆ ಮಾಡಲಾಗಿದ್ರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ 7.10 ಲಕ್ಷ ರೂ. ಮೊತ್ತವಿದ್ದ ಮನೆಯನ್ನು 6 ಲಕ್ಷ ರೂ.ಗಳಿಗೆ ಇಳಿಕೆ ಮಾಡಲಾಗಿದೆ.
ಸಿಎಂ ವಸತಿ ಯೋಜನೆಯಡಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1 ಲಕ್ಷ ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದು, ಈಗಾಗಲೇ 50 ಸಾವಿರ ಮನೆಗಳು ಸಿದ್ಧಗೊಂಡಿದೆ.
ಈ ಕುರಿತು ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂ.ಗಿಂತ ಕಡಿಮೆಯಿರುವ ಜನರಿಗೆ ಈ ಮನೆಗಳನ್ನು ಹಂಚಿಕೆ ಮಾಡಲಾಗುವುದು.
Govt of Karnataka: Super offer from the government for home buyers!