ಗಂಗಾವರಂ ಪೋರ್ಟ್ ಲಿ. ಕಂಪನಿಯಲ್ಲಿನ 58.1 % ಶೇರ್ ಸ್ವಾಧೀನಪಡಿಸಿಕೊಳ್ಳಲಿದ್ದಾರೆ ಗೌತಮ್ ಅದಾನಿ..!
ನವದೆಹಲಿ: ಭಾರತದ ಬೃಹತ್ ಖಾಸಗಿ ಬಂದರುಗಳು ಮತ್ತು ಲಾಜಿಸ್ಟಿಕ್ಸ್ ಕಂಪನಿ ಮತ್ತು ಅದಾನಿ ಸಮೂಹದ ಪ್ರಮುಖ ಸಾರಿಗೆ ಸಂಸ್ಥೆಯಾದ ಎಪಿಎಸ್ ಇಝೆಡ್, ಗಂಗಾವರಂ ಪೋರ್ಟ್ ಲಿ. ಕಂಪನಿಯಲ್ಲಿರುವ ಡಿವಿಎಸ್ ರಾಜು ಮತ್ತು ಕುಟುಂಬದವರ ಶೇ 58.1 ಶೇರ್ ಅನ್ನು ಅದಾನಿ ಕಂಪನಿ ಸ್ವಾಧೀನಪಡಿಸಿಕೊಳ್ಳುತ್ತಿದೆ.
ಹೌದು ಆಂಧ್ರಪ್ರದೇಶದ ಉತ್ತರ ಭಾಗದಲ್ಲಿರುವ ವಿಶಾಖಪಟ್ಟಣದ ಬಂದರಿನ ಪಕ್ಕದಲ್ಲಿರುವ ಗಂಗಾವರಂ ಪೋರ್ಟ್ ಲಿಮಿಟೆಡ್ ಕಂಪನಿಯ ಶೇ 58.1ರಷ್ಟು ಪಾಲನ್ನು 3,604 ಕೋಟಿಗೆ ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ APSEZ ಪ್ರಕಟನೆಯಲ್ಲಿ ತಿಳಿಸಿದೆ.
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಈ ಸಂಬಂಧ ಟ್ವೀಟ್ ಮಾಡಿದ್ದು, ‘ಗಂಗಾವರಂ ಬಂದರಿನಲ್ಲಿ APSEZ ನ ಶೇ 89.6ರಷ್ಟು ಪಾಲನ್ನು ಹೊಂದುವ ಮೂಲಕ ಅದಾನಿ ಗ್ರೂಪ್ ತನ್ನ ವಹಿವಾಟನ್ನು ವಿಸ್ತರಿಸಿಕೊಂಡಿದೆ. ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರು ಡೆವಲಪರ್ ಮತ್ತು ಆಪರೇಟರ್ ಆಗಿ, ನಾವು ಭಾರತದ ಮತ್ತು ಆಂಧ್ರದ ಕೈಗಾರಿಕೀಕರಣವನ್ನು ತ್ವರಿತಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಸಾಲ ಪಾವತಿ ಅವಧಿ ವಿಸ್ತರಣೆ ಸಾಧ್ಯವಿಲ್ಲ ಎಂಬ RBI ನಿಲುವಿಗೆ ಸುಪ್ರೀಂಕೋರ್ಟ್ ಸಮ್ಮತಿ..!
ಕುಡಿದು ಮೃತಪಟ್ಟರೆ ವಿಮೆ ಹಣ ಕುಟುಂಬಕ್ಕೆ ಸಿಗುವುದಿಲ್ಲ : ಸುಪ್ರೀಂ ಕೋರ್ಟ್..!
ಕೋವಿಡ್ ಲಸಿಕೆ ಪಡೆದ ಓವೈಸಿ : ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಮನವಿ..!