ಚಿತ್ರನಟನಿಂದ ಹುಡುಗಿಯ ಕಿಡ್ನಾಪ್ ! ಯಾವುದೇ ಸಿನಿಮಾ ಲವ್ಸ್ಟೋರಿಗಿಂತ ಕಮ್ಮಿಯಿಲ್ಲ ಜಗ್ಗೇಶ್ ಪರಿಮಳಾ ದಂಪತಿಗಳ ಲವ್ ಸ್ಟೋರಿ
ನಟ ಜಗ್ಗೇಶ್ ಪರಿಮಳಾ ದಂಪತಿಗಳು ನಿನ್ನೆಯಷ್ಟೇ 37ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಜಗ್ಗೇಶ್, ಋಣಾನುಬಂಧಂರೂಪೇಣಾಂ ಪಶುಪತ್ನಿಸುತಆಲಯ. Marrages are made in heaven. ಪ್ರೀತಿಸುವುದು ತಪ್ಪಲ್ಲಾ, ಪ್ರೀತಿಸಿದ ಮೇಲೆ ಬಾಳದಿರುವುದು ತಪ್ಪು. 22/3/1984 ನಾನು ಪರಿಮಳನಿಗೆ ತಾಳಿ ಕಟ್ಟಿ ಇಂದಿಗೆ 37 ವರ್ಷ! ನನ್ನ ಎಲ್ಲಾ ಗುಣ ಕಷ್ಟ ಸಹಿಸಿ ಹೆಜ್ಜೆ ಹಾಕಿ ಬದುಕಿದ ಮಡದಿಗೆ ಧನ್ಯವಾದ ಸಣ್ಣ ಪದ. ನನ್ನ ಎರಡನೇ ತಾಯಿ ಸ್ಥಾನ ನೀಡಿರುವೆ’ ಎಂದು ಟ್ವೀಟ್ ಮಾಡಿದ್ದಾರೆ.
"ಋಣಾನುಬಂಧಂರೂಪೇಣಾಂ ಪಶುಪತ್ನಿಸುತಆಲಯ"
"Marrages are made in heaven"
"ಪ್ರೀತಿಸುವುದು ತಪ್ಪಲ್ಲಾ ಪ್ರೀತಿಸಿದ ಮೇಲೆ ಬಾಳದಿರುವುದು ತಪ್ಪು"
22/3/1984 ನಾನು ಪರಿಮಳನಿಗೆ ತಾಳಿ ಕಟ್ಟಿ ಇಂದಿಗೆ 37ವರ್ಷ!
ನನ್ನ ಎಲ್ಲಾಗುಣ ಕಷ್ಟ ಸಹಿಸಿ ಹೆಜ್ಜೆ ಹಾಕಿ ಬದುಕಿದ ಮಡದಿಗೆ ಧನ್ಯವಾದ ಸಣ್ಣ ಪದ….
ನನ್ನ ಎರಡನೆ ತಾಯಿ ಸ್ಥಾನ ನೀಡಿರುವೆ🥰🥰 pic.twitter.com/gIf1ZGU4Uh— ನವರಸನಾಯಕ ಜಗ್ಗೇಶ್ (@Jaggesh2) March 22, 2021
ಜಗ್ಗೇಶ್ ಪರಿಮಳಾ ಅವರ ರಿಯಲ್ ಲೈಫ್ ಲವ್ ಸ್ಟೋರಿ ಯಾವುದೇ ಸಿನಿಮಾ ಲವ್ ಸ್ಟೋರಿಗಿಂತ ಕಡಿಮೆಯಿಲ್ಲ. ಜಗ್ಗೇಶ್ ಮತ್ತು ಪರಿಮಳಾ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲ ಮದುವೆ ಆದ ಬಳಿಕವೂ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದಾರೆ.
ಪ್ರೀತಿಯ ಬಲೆಗೆ ಬಿದ್ದಾಗ ಜಗ್ಗೇಶ್ ಅವರು 19ರ ವಯಸ್ಸಿನವರಾಗಿದ್ದರೆ, ಪರಿಮಳಾ ಅವರಿಗೆ ಕೇವಲ 14 ವರ್ಷ. 1984ರ ಮಾ.22ರಂದು ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅವರಿಬ್ಬರು ಮ್ಯಾರೇಜ್ ಆದರು.
ಮದುವೆಯಾದ ಮೂರನೇ ದಿನ ಪರಿಮಳಾ ತಂದೆ ಪರಿಮಳಾರನ್ನು ಕರೆದುಕೊಂಡು ಹೋಗುತ್ತಾರೆ. ಬಳಿಕ ಸುಮಾರು ಒಂದೂವರೆ ವರ್ಷ ಕಾಲ ಇಬ್ಬರ ನಡುವೆ ಯಾವುದೇ ಸಂಪರ್ಕ ಇರುವುದಿಲ್ಲ. ನಂತರ ಒಂದು ದಿನ ಬೆಂಗಳೂರಿನಲ್ಲಿದ್ದ ಜಗ್ಗೇಶ್ ಮದ್ರಾಸ್ಗೆ ತೆರಳಿ ಪರಿಮಳಾ ಅವರನ್ನು ಕರೆದು ಕೊಂಡು ಬರುತ್ತಾರೆ. ಆಗ ಜಗ್ಗೇಶ್ ಮೇಲೆ ಅಪಹರಣದ ಕೇಸ್ ದಾಖಲಾಗುತ್ತದೆ. ಅಷ್ಟೇ ಅಲ್ಲ ಈ ಸುದ್ದಿ ‘ಚಿತ್ರನಟನಿಂದ ಹುಡುಗಿಯ ಕಿಡ್ನಾಪ್’ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಮುಂದೆ ಈ ಅಪಹರಣದ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಲೇರಿ, ಜಗ್ಗೇಶ್ ಪರಿಮಳಾ ಅವರ ಪ್ರೀತಿಗೆ ಜಯ ಸಿಗುತ್ತದೆ.
ನಂತರವೂ ತುಂಬ ಕಷ್ಟದ ಜೀವನ ನಡೆಸಿದ ಈ ದಂಪತಿಗಳ ಬದುಕಲ್ಲಿ ಜಗ್ಗೇಶ್ ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿದ್ದಂತೆಯೇ ಒಳ್ಳೆಯ ದಿನಗಳು ಪ್ರಾರಂಭಗೊಳ್ಳುತ್ತದೆ. ಬಳಿಕ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತು. ಜೀವನದ ಅನೇಕ ಏಳು-ಬೀಳುಗಳನ್ನು ಜೊತೆಯಾಗಿ ಎದುರಿಸಿಕೊಂಡು ಬಂದಿರುವ ಈ ಜೋಡಿಗಳು 37 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನೂರಾರು ವರ್ಷ ಈ ದಂಪತಿಗಳು ಜೊತೆಯಾಗಿ ಸಂತೋಷದಿಂದ ಬಾಳಲಿ ಎಂದು ಹಾರೈಸೋಣ.
ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ತಿನ್ನುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು https://t.co/ebHn79UbYs
— Saaksha TV (@SaakshaTv) March 19, 2021
ಐಟಿಆರ್ ಮರುಪಾವತಿ ಭರ್ತಿ ಮಾಡಿದ ನಂತರ ಈ ಅಂಶಗಳನ್ನು ಪರಿಶೀಲಿಸಿ https://t.co/tsMNkVA0BK
— Saaksha TV (@SaakshaTv) March 19, 2021
ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ https://t.co/Ts767i1Wrv
— Saaksha TV (@SaakshaTv) March 19, 2021
ದೊಣ್ಣೆ ಮೆಣಸಿನ ವಾಂಗಿಬಾತ್ https://t.co/AL3rMRyFF5
— Saaksha TV (@SaakshaTv) March 19, 2021