2021ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಪತ್ತು ಗಳಿಸಿದ ಭಾರತೀಯ ಉದ್ಯಮಿ ಯಾರು ಗೊತ್ತಾ..!
ನವದೆಹಲಿ: ಕಳೆದ ವರ್ಷ ಕೊರೊನಾ ಹಾವಳಿಯಿಂದ ಬಹುತೇಕ ಎಲ್ಲಾ ಉದ್ಯಮಗಳು ಸಹ ಆರ್ಥಿಕವಾಗಿ ನೆಲಕಚ್ಚಿದ್ದವು. ಈಗೀಗ ಕೊಂಚ ಪುನಶ್ಚೇತಗೊಳ್ತಿವೆ. ಇದರ ನಡುವೆ ಭಾರತದ ಉದ್ಯಮಿಯೊಬ್ಬರು 2021ರಲ್ಲಿ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸಂಪತ್ತು ಗಳಿಸಿದ್ದಾರೆ.
ಹೌದು….ಅದಾನಿ ಗ್ರೂಪ್ ಅಧ್ಯಕ್ಷ ಉದ್ಯಮಿ ಗೌತಮ್ ಅದಾನಿ ಅವರು ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ವಿಶ್ವದಲ್ಲಿ ಅತ್ಯಧಿಕ ಸಂಪತ್ತಿನ ವ್ಯಕ್ತಿಗಳಲ್ಲಿ ಸ್ಥಾನಪಡೆದಿದ್ದಾರೆ.
2021ರ ಇಲ್ಲಿಯವರೆಗೆ ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಅದಾನಿಯವರು 16.2 ಬಿಲಿಯನ್ ಡಾಲರ್ ಗಳಿಸುವ ಮೂಲಕ ಅವರ ಒಟ್ಟು ಆಸ್ತಿಮೌಲ್ಯ 50 ಬಿಲಿಯನ್ ಡಾಲರ್ ಆಗಿದೆ. ಈ ಮೂಲಕ ಅದಾನಿಯವರು ಇದೀಗ ವಿಶ್ವದ 26ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಈ ಮೂಲಕ ವಿಶ್ವದ ಶ್ರೀಮಂತರಾದ ಎಲೊನ್ ಮಸ್ಕ್ , ಜೆಫ್ ಬೆಝೊಸ್ ಅವರನ್ನು ಹಿಂದಿಕ್ಕಿದ್ದಾರೆ. ಇತ್ತೀಚೆಗೆ ಅದಾನಿ ಗ್ರೂಪ್ ವಿಮಾನ ನಿಲ್ದಾಣ ಉದ್ಯಮ ಮತ್ತು ಅಂಕಿಅಂಶ ಕೇಂದ್ರಗಳಲ್ಲಿ ವ್ಯವಹಾರ ಮತ್ತು ಉದ್ಯಮವನ್ನು ವಿಸ್ತರಿಸುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.
ವಾರ್ ಬರ್ಗ್ ಪಿನ್ ಕಸ್ ನ ಒಂದು ಘಟಕವಾದ ಡಿ ಲೇಕ್ ಸೈಡ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಕಂಪನಿಯ ಶೇ 0.49 ರಷ್ಟು ಅಂದರೆ 800 ಕೋಟಿ ರೂಪಾಯಿಗಳನ್ನು ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುತ್ತಿದೆ. ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಇನ್ 14.3 ಬಿಲಿಯನ್ ಬೆಳವಣಿಗೆಯೊಂದಿಗೆ ಸಂಪತ್ತಿನ ಅತ್ಯಧಿಕ ಲಾಭದಿಂದ 2ನೇ ಸ್ಥಾನದಲ್ಲಿದ್ದಾರೆ.