ಗ್ರಾ. ಪಂಚಾಯತಿ ಚುನಾವಣೆ : ಎಲ್ಲೆಲ್ಲಿ ಏನೆಲ್ಲಾ ಎಡವಟ್ಟುಗಳಾಯ್ತು ನೋಡಿ..!
ಇಂದಿನಿಂದ ರಾಜ್ಯಾದ್ಯಂತ ಗ್ರಾಮಾಂತರ ಚುನಾವಣೆಗೆ ಭರ್ಜರಿ ಫೈಟ್ ಆರಂಭವಾಗಿದೆ. ಚುನಾವಣಾ ಕಣ ರಂಗೇರಿದ್ದು, ಮುಂಜಾನೆಯಿಂದಲೇ ಮತದಾರರು ಮತಗಟ್ಟೆಗಳತ್ತ ದಾವಿಸಿ ಹಕ್ಕು ಚಲಾಯಿಸಿದ್ದಾರೆ. ಹಲವೆಡೆ ಚುನಾವಣೆ ನಡೆದಿದ್ದು, ಅನೇಕ ಕಡೆಗಳಲ್ಲಿ ಮತದಾನದ ವೇಳೆ ಎಡವಟ್ಟುಗಳು, ರಾದ್ಧಾಂತಗಳು ನಡೆದಿವೆ. ಕೆಲವೆಡೆ ಮತದಾನವೂ ಮುಂದೂಡಿಕೆಯಾಗಿದೆ.
ಚಿಹ್ನೆ ಬದಲಾವಣೆ , ಚುನಾವಣೆ ಮುಂದೂಡಿಕೆ..!
ಬಳ್ಳಾರಿ: ಮೊದಲಿಗೆ ಬಳ್ಳಾರಿಯ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯಲ್ಲಿ ಅಬ್ಯರ್ಥಿಯ ಚಿಹ್ನೆಯೇ ಬದಲಾವಣೆಯಾಗಿದ್ದು, ಮತದಾನ ಮುಂದೂಡಿಕೆಯಾಗಿದೆ. ಹೌದು ಮುದ್ರಣದ ದೋಷದ ಹಿನ್ನೆಲೆ ಮತದಾನವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಆದೇಶ ಮಾಡಿದ್ದಾರೆ. ಮುದ್ರಣ ದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ ಮಡಿಕೆಯ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಇತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ರಿಟರ್ನಿಂಗ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. 2ನೇ ಹಂತದ ಚುನಾವಣೆಯ ದಿನ ಅಥವಾ ಇನ್ನೊಂದು ದಿನ ಈ ಮತಗಟ್ಟೆಯಲ್ಲಿ ಮತದಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
2 ಬಣಗಳ ನಡುವೆ ಕಿತ್ತಾಟ
ದಾವಣಗೆರೆ: ಇತ್ತ ದಾವಣಗೆರೆಯಲ್ಲಿನ ಮತಗಟ್ಟೆ ಬಳಿ 2 ಬಣಗಳ ನಡುವೆ ವಾಗ್ವಾದ ನಡೆದಿದೆ. ಹದಡಿ ಮತಗಟ್ಟೆ ಬಳಿ ಈ ಘಟನೆ ನಡೆದಿದೆ. ಮತಗಟ್ಟೆ ಬಳಿಯೇ ನಿಂತಿದ್ದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದ 2 ಬಣಗಳ ಕಾರ್ಯಕರ್ತರ ನಡುವೆ ವಾಗ್ವಾದ ಏರ್ಪಟ್ಟಿದೆ. ಗುಂಪು ಘರ್ಷಣೆಯಲ್ಲಿ ಒಬ್ಬರನ್ನೊಬ್ಬರು ಎಳೆದಾಡಿಕೊಂಡ ಪ್ರಸಂಗವೂ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಇದಾದ ಬಳಿಕ ಮುಂಜಾಗ್ರತಾ ಕ್ರಮವಾಗಿ ಹದಡಿ ಗ್ರಾಮದಲ್ಲಿ ಡಿಆರ್ ತುಕಡಿ ನಿಯೋಜಿಸಿ ಬಳಿಕ ಮತದಾನವನ್ನ ಮುಂದುವರೆಸಲಾಯಿತು.
ಕೊರೊನಾ 2ನೇ ಅಲೆ ಮುಚ್ಚಿಟ್ಟುಕೊಂಡ್ರೆ ದೊಡ್ಡ ಅನಾಹುತ: ಸರ್ಕಾರಕ್ಕೆ ಹೆಚ್.ಕೆ ಪಾಟೀಲ್ ವಾರ್ನ್..!
ಚುನಾವಣಾ ಅಧಿಕಾರಿ ಬಳಿ ಲೋಡೆಡ್ ಗನ್ ಪತ್ತೆ..!
ಬೆಳಗಾವಿ: ಮತ್ತೊಂದೆಡೆ ಬೆಳಗಾವಿಯ ದೇಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ರಿವಾಲ್ವಾರ್ ತಂದಿದ್ದಾರೆ. ಇದನ್ನ ಕಂಡ ಮತದಾರರು ಹೌಹಾರಿದ್ದಾರೆ. ಹೌದು ಸುಲೇಮಾನ್ ಸನದಿ ಎಂಬ ಅಧಿಕಾರಿ ಮತಗಟ್ಟೆಗೆ ಲೋಡೆಡ್ ಪಿಸ್ತೂಲ್ ತಂದ್ದದ್ದು ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮತಕೇಂದ್ರಕ್ಕೆ ತೆರಳಿ ಪಿಸ್ತೂಲ್ ನಲ್ಲಿ ತುಂಬಲಾಗಿದ್ದ ಗುಂಡುಗಳನ್ನು ಹೊರಗೆ ತೆಗೆಯುವಂತೆ ತಿಳಿಸಿದ್ದಾರೆ. ಬಳಿಕ ಪಿಸ್ತೂಲ್ ತರಲು ಕಾರಣ ವಿಚಾರಿಸಿದಾಗ ಕ್ರೇಜ್‌ಗಾಗಿ ಪಿಸ್ತೂಲ್ ತಂದಿದ್ದೆ ಎಂದು ಅಧಿಕಾರಿ ಒಪ್ಪಿಕೊಂಡಿದ್ದಾರೆ. ಬಳಿಕ ಅವರ ಬದಲಿಗೆ ಬೇರಿಯವರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲು: ಮನರಂಜನೆ ಹೇಳಿಕೆ ಬೇಡವೆಂದು ಪರಮೇಶ್ವರ್ ಟಾಂಗ್..!
ಸೋಲಿನ ಭೀತಿಯಿಂದ ಆತ್ಮಹತ್ಯೆ..?
ಧಾರವಾಡ: ಇತ್ತ ಧಾರವಾಡದಲ್ಲಿ ಸೋಲಿನ ಭೀತಿಯಿಂದ ಗರಗ ಗ್ರಾಮದ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡಿನ ಅಭ್ಯರ್ಥಿ ದಾಮೋದರ ಕೃಷ್ಣಪ್ಪ ಎಲಿಗಾರ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಮತದಾನ ಆರಂಭವಾದ ಸಮಯಕ್ಕೆ ಮತಕೇಂದ್ರಕ್ಕೆ ಭೇಟಿ ನೀಡಿದ್ದ ದಾಮೋದರ ಕೃಷ್ಣಪ್ಪ ಎಲಿಗಾರ ಬಳಿಕ ಮನೆಗೆ ವಾಪಸಾಗಿದ್ದರು. ಬಳಿಕ ಮನೆಯವರು ಅವರ ಕೋಣೆಗೆ ಹೋಗಿ ನೋಡಿದಾಗ ನೇಣಿ ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ನೋಡಿ ಆಘಾತಕ್ಕೊಳಗಾಗಿದ್ದಾರೆ. ಸೋಲಿನ ಭೀತಿಯಿಂದ ಆತ್ಮಹತ್ಯಗೆ ಶರಣಾಗಿರಬಹುದು ಎನ್ನಲಾಗ್ತಿದೆ. ಆದ್ರೆ ಅಸಲಿ ಕಾರಣ ತನಿಖೆಯ ನಂತರವಷ್ಟೇ ಗೊತ್ತಾಗಬೇಕಾಗಿದೆ.
ಶಾಲಾ-ಕಾಲೇಜು ಪುನಾರಂಭಕ್ಕೆ ಲಂಡನ್ ಕೊರೊನಾ ಕಾರ್ಮೋಡ: ಮತ್ತೆ ದಿನಾಂಕ ಮುಂದೂಡಿಕೆ ಸಾಧ್ಯತೆ..?
ಗೆಲುವಿಗಾಗಿ ವಾಮಾಚಾರ..!
ಬಳ್ಳಾರಿ: ಮತ್ತೊಂದೆಡೆ ಬಳ್ಳಾರಿಯ ಹೊಸಪೇಟೆಯಲ್ಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಕಿಡಿಗೇಡಿಗಳು ಅಡ್ಡ ದಾರಿ ಹಿಡಿದಿದ್ದಾರೆ. ಹೊಸಪೇಟೆ ತಾಲ್ಲೂಕಿನ ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಡಿರಾಂಪುರ ಗ್ರಾಮದಲ್ಲಿ ಅಭ್ಯರ್ಥಿಗಳ ವಿರುದ್ಧ ಮಾಟ, ಮಂತ್ರ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಭ್ಯರ್ಥಿಗಳಾದ ಕೆ. ಗೋಪಾಲ, ವಿ. ರೇಣುಕಮ್ಮ ಹಾಗೂ ಪಿ.ಎನ್. ಹನುಮಂತ ಅವರ ಭಾವಚಿತ್ರ ಇರುವ ಕರಪತ್ರಕ್ಕೆ ಕುಂಕುಮ ಹಚ್ಚಿ, ಅಕ್ಕಿ ಕಾಳು ಹಾಕಿ, ನಿಂಬೆ ಹಣ್ಣು ಮತ್ತು ಮೊಟ್ಟೆ ಇಡಲಾಗಿದೆ ಪತ್ತೆಯಾಗಿದ್ದು, ವಾಮಾಚಾರ ನಡೆದಿರೋದಾಗಿ ತಿಳಿದುಬಂದಿದೆ. ಆದ್ರೆ ಆರೋಪಿಗಳ ಬಗ್ಗೆ ಇನ್ನೂವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಶ್ರೀನಗರದಲ್ಲೂ ಅರಳಿತು ಕಮಲ: ಗೆಲುವಿನ ನಗೆ ಬೀರಿದ ಕೇಸರಿ ಪಾಳಯ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel