ADVERTISEMENT
Sunday, June 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗ್ರಾ. ಪಂಚಾಯತಿ ಚುನಾವಣೆ : ಎಲ್ಲೆಲ್ಲಿ ಏನೆಲ್ಲಾ ಎಡವಟ್ಟುಗಳಾಯ್ತು ನೋಡಿ..!

Namratha Rao by Namratha Rao
December 22, 2020
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

Related posts

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

June 28, 2026
ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

June 28, 2026

ಗ್ರಾ. ಪಂಚಾಯತಿ ಚುನಾವಣೆ : ಎಲ್ಲೆಲ್ಲಿ ಏನೆಲ್ಲಾ ಎಡವಟ್ಟುಗಳಾಯ್ತು ನೋಡಿ..!

ಇಂದಿನಿಂದ ರಾಜ್ಯಾದ್ಯಂತ ಗ್ರಾಮಾಂತರ ಚುನಾವಣೆಗೆ ಭರ್ಜರಿ ಫೈಟ್ ಆರಂಭವಾಗಿದೆ. ಚುನಾವಣಾ ಕಣ ರಂಗೇರಿದ್ದು, ಮುಂಜಾನೆಯಿಂದಲೇ ಮತದಾರರು ಮತಗಟ್ಟೆಗಳತ್ತ ದಾವಿಸಿ ಹಕ್ಕು ಚಲಾಯಿಸಿದ್ದಾರೆ. ಹಲವೆಡೆ ಚುನಾವಣೆ ನಡೆದಿದ್ದು, ಅನೇಕ ಕಡೆಗಳಲ್ಲಿ ಮತದಾನದ ವೇಳೆ ಎಡವಟ್ಟುಗಳು, ರಾದ್ಧಾಂತಗಳು ನಡೆದಿವೆ. ಕೆಲವೆಡೆ ಮತದಾನವೂ ಮುಂದೂಡಿಕೆಯಾಗಿದೆ.

ಚಿಹ್ನೆ ಬದಲಾವಣೆ , ಚುನಾವಣೆ ಮುಂದೂಡಿಕೆ..!

ಬಳ್ಳಾರಿ: ಮೊದಲಿಗೆ ಬಳ್ಳಾರಿಯ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯಲ್ಲಿ ಅಬ್ಯರ್ಥಿಯ ಚಿಹ್ನೆಯೇ ಬದಲಾವಣೆಯಾಗಿದ್ದು, ಮತದಾನ ಮುಂದೂಡಿಕೆಯಾಗಿದೆ. ಹೌದು ಮುದ್ರಣದ ದೋಷದ ಹಿನ್ನೆಲೆ ಮತದಾನವನ್ನು ಸ್ಥಗಿತಗೊಳಿಸುವಂತೆ‌ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಆದೇಶ ಮಾಡಿದ್ದಾರೆ. ‌ ಮುದ್ರಣ ದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ ಮಡಿಕೆಯ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಇತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ರಿಟರ್ನಿಂಗ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. 2ನೇ ಹಂತದ ಚುನಾವಣೆಯ ದಿನ ಅಥವಾ ಇನ್ನೊಂದು ದಿನ ಈ ಮತಗಟ್ಟೆಯಲ್ಲಿ ಮತದಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

2 ಬಣಗಳ ನಡುವೆ ಕಿತ್ತಾಟ

ದಾವಣಗೆರೆ:  ಇತ್ತ  ದಾವಣಗೆರೆಯಲ್ಲಿನ ಮತಗಟ್ಟೆ ಬಳಿ 2 ಬಣಗಳ ನಡುವೆ ವಾಗ್ವಾದ ನಡೆದಿದೆ. ಹದಡಿ ಮತಗಟ್ಟೆ ಬಳಿ ಈ ಘಟನೆ ನಡೆದಿದೆ. ಮತಗಟ್ಟೆ ಬಳಿಯೇ ನಿಂತಿದ್ದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದ 2 ಬಣಗಳ ಕಾರ್ಯಕರ್ತರ ನಡುವೆ  ವಾಗ್ವಾದ ಏರ್ಪಟ್ಟಿದೆ. ಗುಂಪು ಘರ್ಷಣೆಯಲ್ಲಿ ಒಬ್ಬರನ್ನೊಬ್ಬರು ಎಳೆದಾಡಿಕೊಂಡ ಪ್ರಸಂಗವೂ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ  ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಇದಾದ ಬಳಿಕ ಮುಂಜಾಗ್ರತಾ ಕ್ರಮವಾಗಿ ಹದಡಿ ಗ್ರಾಮದಲ್ಲಿ ಡಿಆರ್ ತುಕಡಿ ನಿಯೋಜಿಸಿ ಬಳಿಕ ಮತದಾನವನ್ನ ಮುಂದುವರೆಸಲಾಯಿತು.

ಕೊರೊನಾ 2ನೇ ಅಲೆ ಮುಚ್ಚಿಟ್ಟುಕೊಂಡ್ರೆ ದೊಡ್ಡ ಅನಾಹುತ: ಸರ್ಕಾರಕ್ಕೆ ಹೆಚ್.ಕೆ ಪಾಟೀಲ್ ವಾರ್ನ್..!

ಚುನಾವಣಾ ಅಧಿಕಾರಿ ಬಳಿ ಲೋಡೆಡ್ ಗನ್ ಪತ್ತೆ..!

ಬೆಳಗಾವಿ: ಮತ್ತೊಂದೆಡೆ ಬೆಳಗಾವಿಯ ದೇಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ರಿವಾಲ್ವಾರ್ ತಂದಿದ್ದಾರೆ. ಇದನ್ನ ಕಂಡ ಮತದಾರರು ಹೌಹಾರಿದ್ದಾರೆ. ಹೌದು ಸುಲೇಮಾನ್ ಸನದಿ ಎಂಬ ಅಧಿಕಾರಿ ಮತಗಟ್ಟೆಗೆ ಲೋಡೆಡ್ ಪಿಸ್ತೂಲ್ ತಂದ್ದದ್ದು ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮತಕೇಂದ್ರಕ್ಕೆ ತೆರಳಿ  ಪಿಸ್ತೂಲ್ ನಲ್ಲಿ ತುಂಬಲಾಗಿದ್ದ ಗುಂಡುಗಳನ್ನು ಹೊರಗೆ ತೆಗೆಯುವಂತೆ ತಿಳಿಸಿದ್ದಾರೆ. ಬಳಿಕ  ಪಿಸ್ತೂಲ್ ತರಲು ಕಾರಣ ವಿಚಾರಿಸಿದಾಗ  ಕ್ರೇಜ್‌ಗಾಗಿ ಪಿಸ್ತೂಲ್ ತಂದಿದ್ದೆ ಎಂದು ಅಧಿಕಾರಿ ಒಪ್ಪಿಕೊಂಡಿದ್ದಾರೆ. ಬಳಿಕ ಅವರ ಬದಲಿಗೆ ಬೇರಿಯವರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲು: ಮನರಂಜನೆ ಹೇಳಿಕೆ ಬೇಡವೆಂದು ಪರಮೇಶ್ವರ್ ಟಾಂಗ್..!

ಸೋಲಿನ ಭೀತಿಯಿಂದ ಆತ್ಮಹತ್ಯೆ..?

ಧಾರವಾಡ: ಇತ್ತ ಧಾರವಾಡದಲ್ಲಿ ಸೋಲಿನ ಭೀತಿಯಿಂದ ಗರಗ ಗ್ರಾಮದ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡಿನ ಅಭ್ಯರ್ಥಿ ದಾಮೋದರ ಕೃಷ್ಣಪ್ಪ ಎಲಿಗಾರ ಎಂಬುವವರು  ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಮತದಾನ ಆರಂಭವಾದ ಸಮಯಕ್ಕೆ ಮತಕೇಂದ್ರಕ್ಕೆ ಭೇಟಿ ನೀಡಿದ್ದ ದಾಮೋದರ ಕೃಷ್ಣಪ್ಪ ಎಲಿಗಾರ ಬಳಿಕ ಮನೆಗೆ ವಾಪಸಾಗಿದ್ದರು. ಬಳಿಕ ಮನೆಯವರು ಅವರ ಕೋಣೆಗೆ ಹೋಗಿ ನೋಡಿದಾಗ ನೇಣಿ ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ನೋಡಿ ಆಘಾತಕ್ಕೊಳಗಾಗಿದ್ದಾರೆ.  ಸೋಲಿನ ಭೀತಿಯಿಂದ ಆತ್ಮಹತ್ಯಗೆ ಶರಣಾಗಿರಬಹುದು ಎನ್ನಲಾಗ್ತಿದೆ. ಆದ್ರೆ ಅಸಲಿ ಕಾರಣ ತನಿಖೆಯ ನಂತರವಷ್ಟೇ ಗೊತ್ತಾಗಬೇಕಾಗಿದೆ.

ಶಾಲಾ-ಕಾಲೇಜು ಪುನಾರಂಭಕ್ಕೆ ಲಂಡನ್ ಕೊರೊನಾ ಕಾರ್ಮೋಡ: ಮತ್ತೆ ದಿನಾಂಕ ಮುಂದೂಡಿಕೆ ಸಾಧ್ಯತೆ..?

ಗೆಲುವಿಗಾಗಿ ವಾಮಾಚಾರ..!

ಬಳ್ಳಾರಿ: ಮತ್ತೊಂದೆಡೆ ಬಳ್ಳಾರಿಯ ಹೊಸಪೇಟೆಯಲ್ಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಕಿಡಿಗೇಡಿಗಳು ಅಡ್ಡ ದಾರಿ ಹಿಡಿದಿದ್ದಾರೆ. ಹೊಸಪೇಟೆ ತಾಲ್ಲೂಕಿನ ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಡಿರಾಂಪುರ ಗ್ರಾಮದಲ್ಲಿ ಅಭ್ಯರ್ಥಿಗಳ ವಿರುದ್ಧ ಮಾಟ, ಮಂತ್ರ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.  ಅಭ್ಯರ್ಥಿಗಳಾದ ಕೆ. ಗೋಪಾಲ, ವಿ. ರೇಣುಕಮ್ಮ ಹಾಗೂ ಪಿ.ಎನ್‌. ಹನುಮಂತ ಅವರ ಭಾವಚಿತ್ರ ಇರುವ ಕರಪತ್ರಕ್ಕೆ ಕುಂಕುಮ ಹಚ್ಚಿ, ಅಕ್ಕಿ ಕಾಳು ಹಾಕಿ, ನಿಂಬೆ ಹಣ್ಣು ಮತ್ತು ಮೊಟ್ಟೆ ಇಡಲಾಗಿದೆ ಪತ್ತೆಯಾಗಿದ್ದು, ವಾಮಾಚಾರ ನಡೆದಿರೋದಾಗಿ ತಿಳಿದುಬಂದಿದೆ. ಆದ್ರೆ ಆರೋಪಿಗಳ ಬಗ್ಗೆ ಇನ್ನೂವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಶ್ರೀನಗರದಲ್ಲೂ ಅರಳಿತು ಕಮಲ: ಗೆಲುವಿನ ನಗೆ ಬೀರಿದ ಕೇಸರಿ ಪಾಳಯ..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BellaryBJPCongressdavanageredharavadaElectiongrama panchayathi electionJDS
ShareTweetSendShare
Join us on:

Related Posts

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

by Shwetha
June 28, 2026
0

ನವದೆಹಲಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಹಾಗೂ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜೊತೆಗಿನ ಸಂಬಂಧದ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಅಸಮಾಧಾನ...

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

by Shwetha
June 28, 2026
0

ಹೊಸದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಭದ್ರತೆಯಿಲ್ಲದೆ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸುವ ಮೂಲಕ ಕಾಂಗ್ರೆಸ್ ಹಿರಿಯ...

ಪ್ರದೀಪ್ ಈಶ್ವರ್ ಮತ್ತೆ ಗೆದ್ದರೆ ಅವರ ಮನೆ ಮುಂದೆ ಸೆಕ್ಯೂರಿಟಿ ಕೆಲಸ ಮಾಡ್ತೀನಿ: ಗಂಡಸ್ತನವಿದ್ರೆ ಸವಾಲ್ ಸ್ವೀಕರಿಸು ಶಾಸಕ ಪ್ರದೀಪ್ ಈಶ್ವರ್ ಗೆ ರವಿಕುಮಾರ್ ಓಪನ್ ಚಾಲೆಂಜ್

ಪ್ರದೀಪ್ ಈಶ್ವರ್ ಮತ್ತೆ ಗೆದ್ದರೆ ಅವರ ಮನೆ ಮುಂದೆ ಸೆಕ್ಯೂರಿಟಿ ಕೆಲಸ ಮಾಡ್ತೀನಿ: ಗಂಡಸ್ತನವಿದ್ರೆ ಸವಾಲ್ ಸ್ವೀಕರಿಸು ಶಾಸಕ ಪ್ರದೀಪ್ ಈಶ್ವರ್ ಗೆ ರವಿಕುಮಾರ್ ಓಪನ್ ಚಾಲೆಂಜ್

by Shwetha
June 28, 2026
0

ಬಿಡದಿ ಟೌನ್‌ಶಿಪ್ ವಿಚಾರವಾಗಿ ಆರಂಭವಾದ ರಾಜಕೀಯ ಜಟಾಪಟಿ ಈಗ ವೈಯಕ್ತಿಕ ಸವಾಲು ಮತ್ತು ಪಂಥಾಹ್ವಾನಗಳ ಹಂತಕ್ಕೆ ತಲುಪಿದೆ. ಸಿಎಂ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ...

ರಿಯಲ್ ಎಸ್ಟೇಟ್ ದಂಧೆಗಾಗಿ ರೈತರ ಭೂಮಿ ಬೇಕೆ: ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ -ಖಾಲಿ ಕುರ್ಚಿ ಬಿಟ್ಟು ಡಿಕೆಶಿಗೆ ಸವಾಲು ಹಾಕಿದ ಹೆಚ್ ಡಿ ಕುಮಾರಸ್ವಾಮಿ

ರಿಯಲ್ ಎಸ್ಟೇಟ್ ದಂಧೆಗಾಗಿ ರೈತರ ಭೂಮಿ ಬೇಕೆ: ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ -ಖಾಲಿ ಕುರ್ಚಿ ಬಿಟ್ಟು ಡಿಕೆಶಿಗೆ ಸವಾಲು ಹಾಕಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 28, 2026
0

ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಭೈರಮಂಗಲದಲ್ಲಿ ನಡೆದ ರೈತರ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 28, 2026
0

ದಿನ ಭವಿಷ್ಯ : 28-06-2026 1. ಮೇಷ ರಾಶಿ ಇಂದಿನ ದಿನ ನಿಮಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಸೂರ್ಯನ ಪ್ರಭಾವದಿಂದಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ, ಆದರೆ ಅತಿಯಾದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram