ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ರಾಮೋತ್ಸವ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಹಿಂದೂ ಪರಿಷತ್ ಕೆಆರ್ ಪುರ ಅದ್ದೂರಿ ರಾಮೋತ್ಸವ ಬೃಹತ್ ಶೋಭ ಯಾತ್ರೆಯನ್ನು ರಾಮಮೂರ್ತಿ ನಗರದ ಐಟಿಐ ಸರ್ಕಲ್ ನಲ್ಲಿ ಬೃಹತ್ ಯಾತ್ರೆ ಪ್ರಾರಂಭಗೊಂಡು ರಾಮಮೂರ್ತಿ ನಗರ ಮುಖ್ಯರಸ್ತೆಯಲ್ಲಿ ಹೊರಟ ಯಾತ್ರೆಯಲ್ಲಿ ಸಹಸ್ರಾರು ಜನರು ಹಾಗೂ ನಾಯಕರುಗಳು ಭಾಗವಹಿಸಿ ಯಾತ್ರೆಯ ಉದ್ದಗಲಕ್ಕೂ ಎಲ್ಲ ಪ್ರಮುಖ ನಾಯಕರುಗಳು ಜೈ ಶ್ರೀ ರಾಮ್ ಎಂಬ ಘೋಷಣೆಯನ್ನು ಯೋoದಿಗೆ ಡಿಜೆ ಸೌಂಡಿಗೆ ಸ್ಟೆಪ್ ಹಾಕುವ ಮೂಲಕ ಹಿಂದೂ ನಾವೆಲ್ಲ ಒಂದು ಎಂಬ ಭಾವನೆಯನ್ನು ವ್ಯಕ್ತಪಡಿಸಿದರು.
ಅದರಲ್ಲೂ ಬೈರತಿ ಚಂದ್ರಣ್ಣ ನವರ ನೃತ್ಯವoತು ಎಲ್ಲರ ಗಮನ ಸೆಳೆಯಿತು. ನಂತರ ವಿಜಿನಾಪುರದ ಕೆಂಪೇಗೌಡ ರಸ್ತೆಯಲ್ಲಿ ಕಾರ್ಯಕ್ರಮ ಕೊನೆಗೊಳ್ಳುವ ಸಂದರ್ಭದಲ್ಲಿ ಮಾತನಾಡಿದಂತಹ ಡಾ. ಗಿರಿಧರ್ ಉಪಾಧ್ಯಾಯರವರ ಪ್ರಚಾರ ಭಾಷಣ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು, ಈ ಬೃಹತ್ ಕೇಸರಿ ಹಬ್ಬ ಅದ್ದೂರಿ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಪ್ರತಿಯೊಬ್ಬ ಗಣ್ಯ ಹಿಂದುಗಳಿಗೂ ವಿಶ್ವ ಹಿಂದೂ ಪರಿಷತಧ್ ರಾಮಮೂರ್ತಿ ನಗರ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.