ರಾಯಚೂರಿನಲ್ಲಿ ಲಾಕ್ ಡೌನ್ ಮಧ್ಯೆ ಅದ್ಧೂರಿ ಮದುವೆ

1 min read

ರಾಯಚೂರಿನಲ್ಲಿ ಲಾಕ್ ಡೌನ್ ಮಧ್ಯೆ ಅದ್ಧೂರಿ ಮದುವೆ Raichur

ರಾಯಚೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಅದ್ಧೂರಿ ಮದುವೆಗಳು ನಡೆಯುತ್ತಿವೆ.

ದೇವದುರ್ಗ ತಾಲೂಕಿನ ಆಕಳಕುಂಪಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಮದುವೆಯನ್ನ ಅದ್ಧೂರಿಯಾಗಿ ಮಾಡಲಾಗಿದೆ.

ಈ ಮದುವೆ ಸಮಾರಂಭದಲ್ಲಿ ನೂರಾರು ಜನ ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿ ಭಾಗವಹಿಸಿದ್ದಾರೆ.

Raichur

ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ನೂರಾರು ಜನರು ಮದುವೆಯಲ್ಲಿ ಭಾಗವಹಿಸಿದ್ದರು.

ಮದುವೆ ನಂತರ ಗ್ರಾಮದಲ್ಲಿ ಭರ್ಜರಿ ಮೆರವಣಿಗೆ ಮಾಡಲಾಗಿದೆ. ಡಿಜೆ ಹಾಕಿ ಮೆರವಣಿಗೆಯಲ್ಲಿ ಯುವಕರು ಕುಣಿದಿದ್ದಾರೆ.

ಈಗಾಗಲೇ ಆಕಳಕುಂಪಿ ಗ್ರಾಮದಲ್ಲಿ ಬರೋಬ್ಬರಿ 37 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ.

ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಆದ್ರೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd