ವಿಜೃಭಂಣೆಯಿಂದ ಜರುಗಿದ ದೈವ ಕೋಲ ಉತ್ಸವ
ಮಡಿಕೇರಿ : ಮಡಕೇರಿಯ ಆರಾಧ್ಯ ದೈವ, ಮೂರು ವರ್ಷಗಳಿಗೊಮ್ಮೆ ನಡೆಯುವ ದೈವ ಕೋಲ ಉತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಿತು.
ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವ ಕೊರೊನಾ ಕಾರಣದಿಂದ ಮೊಟಗುಗೊಂಡಿತ್ತು. ಕೇವಲ ಹರಕೆ ಒಪ್ಪಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಬಹಳಷ್ಟು ವಿಜೃಂಭಣೆಯಿಂದ ನಡೆಯಿತು ಈ ಉತ್ಸವವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.
ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ರಾತ್ರಿಯಿಡಿ ನಡೆದ ಈ ಕೋಲಕ್ಕೆ ಸಾವಿರಾರರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಪ್ರಮುಖವಾಗಿ ವಿಷ್ಣುಮೂರ್ತಿ ಕೋಲ, ಫಾಷಣಮೂರ್ತಿ,ರಕ್ತೇಶ್ವರಿ,ಗುಳಿಗನ ಕೋಲ, ಅಪ್ಪಚ್ಚೀರ ಮಂದಣ್ಣ ಸೇರಿದಂತೆ ಹಲವು ಬಗೆಯ ಕೋಲಗಳು ನಡೆದವು.
ತೆರೆ ಕಟ್ಟಿದವರ ವೇಷಭೂಷಣಗಳನ್ನು ಮತ್ತು ವಿಷ್ಣುಮೂರ್ತಿಯು ಬೆಂಕಿಗೆ ಬೀಳುವ ದೃಶ್ಯವನ್ನು ನೋಡಲು ಅಪಾರ ಸಂಖ್ಯೆಯ ಜನ ಸೇರಿದ್ದರು.
ಇನ್ನು ಈ ಉತ್ಸವಕ್ಕೆ ಅದರದ್ದೆಯಾದ ಇತಿಹಾಸವಿದೆ. ರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹ ಆಚರಣೆಯಾಗಿದೆ. ರಾಜರ ಕಾಲದಲ್ಲಿ ಭೀಕರ ಕಾಯಿಲೆಗಳು ಕಾಣಿಸಿಕೊಂಡಿದ್ದ ಸಂದರ್ಭ ಇಲ್ಲಿಯ ರಾಜರು ಕೇರಳ ರಾಜರಾದ ಮಲಯ ಹಾಗೂ ತಂಬರ ರಾಜರ ಮೋರೆ ಹೋಗಿದ್ದರು.