ಕೇಂದ್ರ ಸರ್ಕಾರದಿಂದ ಮೊಬೈಲ್ ಬಳಕೆದಾರರಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದ್ದು, ಇಂಟರ್ ನೆಟ್ ಸಂಪರ್ಕವಿಲ್ಲದೇ ಮೊಬೈಲ್ ನಲ್ಲಿ ಟಿವಿ ಚಾನೆಲ್ ವೀಕ್ಷಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನದ ಸಾಮರ್ಥ್ಯವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದ್ದು, ಇದು ಸಾಧ್ಯವಾದಲ್ಲಿ ಮೊಬೈಲ್ ಬಳಕೆದಾರರು ನೆಟ್ ಇಲ್ಲದೆ ಲೈವ್ ಟಿವಿ, ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.
ದೇಶದಲ್ಲಿ ಈಗಾಗಲೇ 80 ಕೋಟಿಗೂ ಅಧಿಕ ಮೊಬೈಲ್ ಬಳಕೆದಾರರಿದ್ದಾರೆ. ಅವರಿಗಾಗಿ ಶೈಕ್ಷಣಿಕ ನೆರವು, ತುರ್ತು ಎಚ್ಚರಿಕೆ ನೀಡಲು ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನ ಬಳಸಿಕೊಳ್ಳುವ ಕುರಿತು ಕೇಂದ್ರ ಚಿಂತನೆ ನಡೆಸಿದೆ.
ಡೈರೆಕ್ಟ್ ಟು ಮೊಬೈಲ್ ನಿಂದ ಟೆಲಿಕಾಂ ಕಂಪನಿಗಳ ಡೇಟಾ ಆದಾಯ ಕುಸಿಯುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರದ ಈ ಪ್ರಸ್ತಾವನೆಗೆ ಟೆಲಿಕಾಂ ಆಪರೇಟರ್ ಗಳು ವಿರೋಧ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಸರ್ಕಾರವು ಮಹತ್ವದ ಸಭೆ ನಡೆಸಲಿದ್ದು, ಸಭೆಯಲ್ಲಿ ನಟೆ ಇಲ್ಲದೆ ಮೊಬೈಲ್ ನಲ್ಲಿ ಟಿವಿ ವೀಕ್ಷಿಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು ಎನ್ನಲಾಗಿದೆ.








