ಪ್ಯಾನ್ ಕಾರ್ಡ್ದಾರರಿಗೆ ಒಂದು ಮಹತ್ವದ ಸುದ್ದಿ
ಹೊಸದಿಲ್ಲಿ, ಜೂನ್ 25: ಕೇಂದ್ರ ಹಣಕಾಸು ಸಚಿವಾಲಯ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ಗೆ ಜೋಡಣೆ ಮಾಡುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ.
ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31, 2021 ರವರೆಗೆ ವಿಸ್ತರಿಸಲಾಗಿದೆ. ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಈ ಹಿಂದಿನ ಗಡುವು ಜೂನ್ 30, 2020 ಆಗಿತ್ತು. ಕೊರೊನಾ ವೈರಸ್ ಸಾಂಕಮಿಕ ಹಾಗೂ ಕಾರಣಾಂತರದಿಂದ ಈ ಕೆಲಸ ಮಾಡದೇ ಇರುವವರನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯ ಅಂತಿಮ ದಿನಾಂಕವನ್ನು ಮಾರ್ಚ್ 31, 2021 ಕ್ಕೆ ವಿಸ್ತರಿಸಿದೆ.
ನೀವು ಮನೆಯಲ್ಲಿ ಕುಳಿತು ಕೂಡ ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಅನ್ನು ಲಿಂಕ್ ಬಹುದಾಗಿದೆ.
ಮನೆಯಲ್ಲೇ ಕುಳಿತು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ಗೆ ಹೇಗೆ ಲಿಂಕ್ ಮಾಡಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಪ್ಯಾನ್ ಮತ್ತು ಆಧಾರ್ ಅನ್ನು 567678 ಅಥವಾ 56161 ಗೆ ಎಸ್ಎಂಎಸ್ ಮೂಲಕ ಲಿಂಕ್ ಮಾಡಬಹುದು. SMS ನ ಸ್ವರೂಪ ಹೀಗಿದೆ: UIDPAN <SPACE> <12 ಅಂಕಿಯ ಆಧಾರ್ ಸಂಖ್ಯೆ> <SPACE> <10 ಅಂಕೆ ಪ್ಯಾನ್> ಉದಾಹರಣೆಗಾಗಿ: UIDPAN 100023456789 XXYZ0123X.
ಅಥವಾ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ ಮೂಲಕ ಕೂಡ ಲಿಂಕ್ ಮಾಡಬಹುದಾಗಿದೆ.
1. ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ incometaxindiaefiling.gov.in ಗೆ ಭೇಟಿನೀಡಿ
2. ಅಲ್ಲಿರುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ.
3. ‘ಕ್ಲಿಕ್ ಹಿಯರ್’ ಮೇಲೆ ಕ್ಲಿಕ್ ಮಾಡಿ. ಬಳಿಕ ಕೊಟ್ಟಿರುವ ನಿಗದಿತ ಜಾಗದಲ್ಲಿ ಪ್ಯಾನ್, ಆಧಾರ್ ಸಂಖ್ಯೆ, ನಿಮ್ಮ ಹೆಸರು ಮತ್ತು ಕೊಟ್ಟಿರುವ ಕ್ಯಾಪ್ಚಾ ಟೈಪ್ ಮಾಡಿ.
4. ನಂತರ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ. ಈಗ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಲಿದೆ. ಇಲ್ಲಿ ಗಮನಿಸಬೇಕಾದದ್ದು, ಹೆಸರು ಅಥವಾ ಸಂಖ್ಯೆಯಲ್ಲಿ ಯಾವುದೇ ರೀತಿಯ ತಪ್ಪುಗಳು ಇರಬಾರದು.
ಇಷ್ಟೇ ಅಲ್ಲದೆ ಪ್ಯಾನ್ ಕೇಂದ್ರಕ್ಕೆ ಕೂಡ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ಗೆ ಲಿಂಕ್ ಮಾಡಬಹುದು. ಇದಕ್ಕಾಗಿ ನೀವು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡಿನ ಫೋಟೊ ಕಾಪಿ ಮತ್ತು 25-110 ರೂ ಶುಲ್ಕ ಪಾವತಿ ಮಾಡಬೇಕು.
ಪ್ಯಾನ್-ಆಧಾರ್ ಲಿಂಕ್ ಗಾಗಿ, ನೀವು ನಮೂದಿಸಿದ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗವು ಪ್ಯಾನ್ ಮತ್ತು ಆಧಾರ್ ಎರಡರಲ್ಲೂ ಒಂದೇ ಆಗಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಆಧಾರ್ ಕಾರ್ಡ್ನಲ್ಲಿರುವ ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ನಲ್ಲಿರುವ ಹೆಸರು ನಿಖರವಾಗಿರಬೇಕು.
ನಿರ್ದಿಷ್ಟವಾಗಿ ವಿನಾಯಿತಿ ನೀಡದ ಹೊರತು ಐಟಿಆರ್, ಆಧಾರ್ ಮತ್ತು ಪ್ಯಾನ್ ಲಿಂಕ್ ಅನ್ನು ಜೋಡಣೆ ಮಾಡುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.