green crackers
ಬೆಂಗಳೂರು: ಕೊರೊನಾ ಹಾವಳಿ ನಡುವೆಯೂ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ದೀಪಾವಳಿ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆದ್ರೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಅದ್ರಲ್ಲೂ ಕೇವಲ ಇರುವವರಿಗೆ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಪಟಾಕಿ ಮಾರಾಟಕ್ಕೂ ಸಮಯ ನಿಗದಿ ಮಾಡಲಾಗಿದೆ. ಅಂದ್ಹಾಗೆ ನವೆಂಬರ್ 11 ರಿಂದ 16 ರವರೆಗೆ ಮಾತ್ರ ಪಟಾಕಿ ಮಾರಾಟ ಮಾಡಬಹುದಾಗಿದೆ.
ಇನ್ನೂ ಪಟಾಕಿ ಮಾರುವ ಮುನ್ನ ಸಂಬಂಧಪಟ್ಟ ಇಲಾಖೆ ಮತ್ತು ಪ್ರಾಧಿಕಾರದ ಅನುಮತಿ ಪಡೆಯಬೇಕಿದೆ. ಸಾರ್ವಜನಿಕ ಸ್ಥಳಗಳಿಂದ ದೂರದ ಮೈದಾನದಲ್ಲಿ ಪಟಾಕಿ ಮಾರಾಟ ಅವಕಾಶವಿದ್ದು, ಆರು ಮೀಟರ್ ಅಂತರದಲ್ಲಿ ಮಳಿಗೆಗಳಿರಬೇಕು ಎಂದು ಸೂಚನೆ ನೀಡಲಾಗಿದೆ. ಲೈಸೆನ್ಸ್ ಪಡೆದವರು ಮಳಿಗೆಯಲ್ಲಿ ಕಡ್ಡಾಯವಾಗಿ ಇರಲೇಬೇಕು. ಅಲ್ಲದೇ ಮಾರಾಟದ ಪರವಾನಗಿಯನ್ನ ಮಳಿಗೆಯ ಎದುರುಗಡೆ ಡಿಸ್ಪ್ಲೇ ಮಾಡಬೇಕಾಗಿದೆ. ಹಸಿರು ಪಟಾಕಿ ಮಳಿಗೆ ಬಳಿ ಸ್ಯಾನಿಟೇಷನ್ ಕಡ್ಡಾಯವಾಗಿದ್ದು, ಮಾರಾಟಗಾರರು, ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಎಂದು ಸರ್ಕಾರ ಆದೇಶ ಹೊರಡಿಸಿದೆ.
green crackers
ದೀಪಾವಳಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ಕಾದಿಗೆ ಬಂಪರ್ ಉಡುಗೊರೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








