ಬೆಂಗಳೂರು ನಗರದಲ್ಲಿ ಮದುವೆ ದಿನವೇ ವರ ಮತ್ತು ಆತನ ಕುಟುಂಬಸ್ಥರು ಮಂಟಪದಿಂದ ಪರಾರಿಯಾದ ಘಟನೆ ನಡೆದಿದೆ. ಮೈಸೂರಿನ ಪ್ರೇಮ್ ಚಂದ್ ಯುವಕ ತನ್ನ ಬಾಲ್ಯದ ಗೆಳತಿಯೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಈ ಜೋಡಿ ಪ್ಯಾರೀಸ್‌ನಲ್ಲಿ ಕೆಲಸದಲ್ಲಿದ್ದು, ಮಾ.3 ರಂದು ಮದುವೆ ನಿಗದಿಯಾಗಿತ್ತು.
ಆದರೆ ಮದುವೆ ಮುನ್ನವೇ ವರನ ಕುಟುಂಬದವರು ₹50 ಲಕ್ಷ ನಗದು, ಅರ್ಧ ಕೆ.ಜಿ ಚಿನ್ನ ಮತ್ತು ಬೆಂಜ್ ಕಾರಿನ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಯನ್ನು ವಧುವಿನ ತಂದೆ ನಿರಾಕರಿಸಿದ್ದಕ್ಕೆ, ಮದುವೆ ಸಮಾರಂಭ ನಡೆಯುತ್ತಿದ್ದ ಮಂಟಪದಿಂದಲೇ ವರ ಮತ್ತು ಆತನ ಕುಟುಂಬಸ್ಥರು ಪರಾರಿಯಾದ ಘಟನೆ ನಡೆದಿದೆ.
ಈ ಬಗ್ಗೆ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಯುತ್ತಿದೆ.








