ನವದೆಹಲಿ: ಕೇಂದ್ರ ಸರ್ಕಾರವು ಬಡ ರೋಗಿಗಳ ಅನುಕೂಲಕ್ಕಾಗಿ ಕ್ಯಾನ್ಸರ್ ಔಷಧಿಗಳ ದರ ಕಡಿಮೆ ಮಾಡಲು ಮುಂದಾಗಿದೆ. ಕ್ಯಾನ್ಸರ್ ಔಷಧಿಗಳ (Cancer Drugs) ದರವನ್ನು ಕಡಿಮೆ ಮಾಡಲು ಜಿಎಸ್ ಟಿ ಕೌನ್ಸಿಲ್ ಮುಂದಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ.
ಮುಂದಿನ ಸಭೆಯಲ್ಲಿ ವೈದ್ಯಕೀಯ ಆರೋಗ್ಯ ವಿಮೆಯ ಮೇಲಿನ ದರ ಕಡಿತದ ಕುರಿತು ಈ ಕುರಿತು ಕೌನ್ಸಿಲ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಜಿಎಸ್‌ಟಿ ಕೌನ್ಸಿಲ್ ನ 54 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀತಾರಾಮನ್, ಕೆಲವು ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ ಟಿ ದರವನ್ನು ಶೇ.12 ರಿಂದ ಶೇ.5 ಕ್ಕೆ ಇಳಿಸಲಾಗಿದೆ. ನಮ್ಕೀನ್ ಮೇಲಿನ ದರವನ್ನು ಶೇ.18 ರಿಂದ ಶೇ.12 ಕ್ಕೆ ಇಳಿಸಿದೆ ಎಂದು ಹೇಳಿದ್ದಾರೆ.
6 ತಿಂಗಳಲ್ಲಿ ಆನ್ ಲೈನ್ ಗೇಮಿಂಗ್ ನಿಂದ ಶೇ..41 ರಷ್ಟು ಆದಾಯ ಹೆಚ್ಚಾಗಿದೆ. ಆನ್ ಲೈನ್ ಗೇಮಿಂಗ್ ನಿಂದ ಆದಾಯವು ಆರು ತಿಂಗಳಲ್ಲಿ 6,909 ಕೋಟಿ ರೂ.ಗೆ ಹೆಚ್ಚಾಗಿದೆ. ಕ್ಯಾಸಿನೊಗಳ ಆದಾಯವು ಶೇ. 3 ರಷ್ಟು ಏರಿಕೆಯಾಗಿದೆ ಎಂದು ಕೂಡ ಹೇಳಿದ್ದಾರೆ.