ರಾಜ್ಯಕ್ಕೆ ಬರಬೇಕಿರೋ ಜಿಎಸ್ ಟಿ ಹಣದಲ್ಲಿ 1500 ಕೋಟಿ ಕಡಿತವಾಗಬಹುದು
ಬೆಂಗಳೂರು : ರಾಜ್ಯ ಸಿಗಬೇಕಿದ್ದ ಜಿಎಸ್ ಟಿ ಪಾಲನ್ನು ಕೊಡದೇ ಸತಾಯಿಸಿದ್ದ ಕೇಂದ್ರ ಸರ್ಕಾರ, ಸಾಲದ ರೂಪದಲ್ಲಿ ಹಣ ಪಡೆಯಲು ಅವಕಾಶ ನೀಡಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಈ ಮಧ್ಯೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಜಿಎಸ್ ಟಿ ಹಣದಲ್ಲಿ 1500 ಕೋಟಿ ರೂ. ಗಳಷ್ಟು ಕಡಿತವಾಗಬಹುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಯಶವಂತರಾಯಗೌಡ ವಿಠಲಗೌಡ ಪಾಟೀಲ್ ಕೇಂದ್ರದಿಂದ ನಮಗೆ ಬರಬೇಕಿರುವ ಜಿಎಸ್?ಟಿ ಪಾಲು ಸಮರ್ಪಕವಾಗಿಲ್ಲ.
ಹೀಗಾಗಿ, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಹೆಚ್ಚು ಹಣ ಪಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಬೊಮ್ಮಾಯಿ, ಈ ವರ್ಷ ಕೇಂದ್ರ ಸರ್ಕಾರದಿಂದ ನಮಗೆ 12,047 ಕೋಟಿ ರೂಪಾಯಿಗಳಷ್ಟು ಪಾಲು ನಿಗದಿಯಾಗಿದೆ.
ಈ ಹಣದ ಪೈಕಿ ಮೊದಲ ಕಂತಿನಲ್ಲಿ ಮೂರು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಬಂದಿದೆ. ಸಾಲದ ರೂಪದಲ್ಲಿ ಸುಮಾರು ಆರು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಬಂದಿದೆ.
ಉಳಿದಂತೆ ಇನ್ನೂ 3,427 ಕೋಟಿ ರೂ. ಬರಬೇಕಿದ್ದು, ಅದು ಕೂಡ ಲಭ್ಯವಾಗುವ ನಿರೀಕ್ಷೆ ಇದೆ.
ಇಷ್ಟಾದರೂ ನಮಗೆ ಲಭ್ಯವಾಗಬೇಕಿರುವ ಜಿಎಸ್ ಟಿ ಪಾಲಿನಲ್ಲಿ ಒಂದರಿಂದ ಒಂದೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ.
ನಮ್ಮ ಜಿಎಸ್ ಟಿ ಪಾಲಿನ ಹಣವನ್ನು ಸಾಲದ ರೂಪದಲ್ಲಿ ಪಡೆದರೂ ಅದಕ್ಕೆ ನಾವು ಅಸಲು,ಬಡ್ಡಿಯನ್ನು ಕಟ್ಟಬೇಕಿಲ್ಲ. ಅದನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡುತ್ತದೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel